ಭಾರಿ ಗಾಳಿ ಮಳೆಗೆ ಕಲಡ್ಕ ಗ್ರಾಮದ ಉಡುವೆಕೋಡಿ ಕುಂಞಣ್ಣ ನಾಯ್ಕ ಮನೆಗೆ ಮರ ಬಿದ್ದು ಸಂಪೂರ್ಣವಾಗಿ ಹಾನಿಯಾದ ಘಟನೆ ಸಂಭವಿಸಿದೆ.
ಮನೆಯವರು ಪಕ್ಕದ ಮನೆಯಲ್ಲಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲೆ ರಾತ್ರಿ ಉಳಿದಿದ್ದರು.. ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.