ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್ ಬಾಲಕೃಷ್ಣ ಕೆ.ವಿ.ಜಿ ಕ್ಯಾಂಪಸ್ ಭೇಟಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶ್ರವಣಬೆಳಗೊಳದ ಶಾಸಕರಾದ ಸಿ. ಎನ್. ಬಾಲಕೃಷ್ಣ ಅವರು ಏ. 30ರಂದು ಕೆ.ವಿ.ಜಿ ಕ್ಯಾಂಪಸ್‌ಗೆ ಭೇಟಿ ನೀಡಿದರು. ಕ್ಯಾಂಪಸ್‌ನ ವಿವಿಧ ವಿದ್ಯಾ ಸಂಸ್ಥೆಗಳನ್ನು ವೀಕ್ಷಿಸಿದ ಇವರು ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಸುಳ್ಯದಂತಹ ತಾಲೂಕು ಕೇಂದ್ರದಲ್ಲಿ ಯಾವುದೇ ನಗರ ಪ್ರದೇಶಗಳಿಗೆ ಕಡಿಮೆಯಿಲ್ಲದಂತೆ ಉತ್ತಮ ಗುಣಮಟ್ಟ ಮತ್ತು ಆಧುನಿಕ ತಂತ್ರಜ್ಞಾನದ ಶಿಕ್ಷಣವನ್ನು ನೀಡುತ್ತಿರುವ ವಿದ್ಯಾಸಂಸ್ಥೆಗಳನ್ನು ಹೊಂದಿರುವ ಕೆ.ವಿ.ಜಿ ಕ್ಯಾಂಪಸ್‌ನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ನಂತರ ಕೆ.ವಿ.ಜಿ ಸಮೂಹ ವಿದ್ಯಾ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣಕಾ ಪ್ರಸಾದ್ ಕೆ.ವಿಯವರ ಆಡಳಿತ ಕಛೇರಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅದ್ಯಕ್ಷರಾದ ಮಾನ್ಯ ಸಿ.ಎನ್ ಬಾಲಕೃಷ್ಣ ರವರನ್ನು ಗೌರವಾಧ್ಯಕ್ಷರಾದ ಡಾ. ಆಂಜನಪ್ಪನವರನ್ನು , ಒಕ್ಕಲಿಗರ ಸಂಘದ ಜೊತೆ ಕಾರ್ಯದರ್ಶಿಗಳಾದ ರಾಘವೇಂದ್ರ, ನಿರ್ದೇಶಕರಾದ ಮಂಜೇ ಗೌಡರನ್ನು ವಿದ್ಯಾಸಂಸ್ಥೆಗಳ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಭೇಟಿ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಡಾ. ಆಂಜನಪ್ಪ, ರಾಜ್ಯ ಒಕ್ಕಲಿಗರ ಸಂಘದ ಜೊತೆ ಕಾರ್ಯದರ್ಶಿ ರಾಘವೇಂದ್ರ, ನಿರ್ದೇಶಕರಾದ ಮಂಜೇಗೌಡ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ನಿರ್ದೇಶಕಿ ಡಾ. ಜ್ಯೋತಿ ಆರ್. ಪ್ರಸಾದ್ ಎ.ಓ.ಎಲ್.ಇ, ನಿರ್ದೇಶಕರಾದ ಡಾ. ಅಭೀಜ್ಞಾ ಕೆ.ಆರ್ ಮತ್ತು ಮಾ. ಮೌರ್ಯ ಆರ್ ಕುರುಂಜಿ, ಸುಳ್ಯ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಜಾಕೆ ಮಾಧವ ಗೌಡ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್. ಎ ರಾಮಚಂದ್ರ, ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಊರುಬೈಲು ಮತ್ತು ಕೆ.ವಿ.ಜಿ ಸಮೂಹ ವಿದ್ಯಾ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.