ಗೌಡ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯದ ಮಂಜೂರಾತಿ
ಸುಳ್ಯಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸಿ. ಎನ್ ಬಾಲಕೃಷ್ಣರವರು ಏ. 30ರಂದು ಭೇಟಿ ನೀಡಿದರು. ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರ ಕೋರಿಕೆಯಂತೆ ಈ ಭಾಗದ ಗೌಡ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಕೆ.ವಿ.ಜಿ ವಿದ್ಯಾಸಂಸ್ಥೆಗಳ ಸಮೀಪದಲ್ಲಿ ಉಚಿತ ವಸತಿ ನಿಲಯವನ್ನು ಮಂಜೂರು ಮಾಡಿರುತ್ತಾರೆ. ಅಧ್ಯಕ್ಷರಾದ ಸಿ.ಎನ್ ಬಾಲಕೃಷ್ಣರವರೊಂದಿಗೆ ಸಂಘದ ಗೌರವಾಧ್ಯಕ್ಷರಾದ ಡಾ. ಅಂಜನಪ್ಪ, ಜತೆ ಕಾರ್ಯದರ್ಶಿಗಳಾದ ರಾಘವೇಂದ್ರ ಮತ್ತು ನಿರ್ದೇಶಕರುಗಳಾದ ಮಂಜೇ ಗೌಡ, ವಸತಿ ನಿಲಯದ ಸ್ಥಳ ವೀಕ್ಷಣೆಗಾಗಿ ಸುಳ್ಯಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ರಿ,ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಈ ಭಾಗದ ಗೌಡ ಸಮುದಾಯದವರ ಬಗ್ಗೆ ವಿವರಿಸುತ್ತಾ, ಬಡ, ಕೃಷಿ, ಕೂಲಿ ಕಾರ್ಮಿಕರ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶ ನನ್ನದಾಗಿದೆ. ಶತಮಾನಗಳಿಂದಲೂ ಉಚಿತ ವಸತಿ ನಿಲಯದ ಬೇಡಿಕೆ ಈ ಭಾಗದ ಜನತೆಯದ್ದಾಗಿರುತ್ತದೆ. ನಾಲ್ಕನೇ ಬಾರಿ ನಿರ್ದೇಶಕರಾಗಿ, ಪ್ರಸ್ತುತ ಉಪಾಧ್ಯಕ್ಷರಾಗಿ ಆಯ್ಕೆ ಹೊಂದಿದ ಈ ಸಂದರ್ಭದಲ್ಲಿ ಅನೇಕ ವರ್ಷಗಳ ಬೇಡಿಕೆಯನ್ನು ಈಡೇರಿಸುವುದು ನನ್ನ ಕರ್ತವ್ಯವಾಗಿದೆ ಎಂಬ ನಿಟ್ಟಿನಲ್ಲಿ ಈ ಬಗ್ಗೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೆ. ಆ ನಿಟ್ಟಿನಲ್ಲಿ ಇವತ್ತು ಆ ಒಳ್ಳೆಯ ದಿನ ಕೂಡಿ ಬಂದಿದೆ. ಎಂದರು. ಈ ಸಂದರ್ಭದಲ್ಲಿ ಎ.ಓ.ಎಲ್.ಇ ಇದರ ನಿರ್ದೇಶಕರಾದ ಡಾ. ಜ್ಯೋತಿ ಆರ್ ಪ್ರಸಾದ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ, ಎ.ಓ.ಎಲ್.ಇ ನಿರ್ದೇಶಕಿ ಡಾ. ಅಭೀಜ್ಞಾ ಕೆ. ಆರ್, ಮಾ. ಮೌರ್ಯ ಆರ್ ಕುರುಂಜಿ, ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜ್ನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಊರುಬೈಲು ಮತ್ತು ಕೆ.ವಿ.ಜಿ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.