ಸುನಾದ ಸಂಗೀತ ಕಲಾ ಶಾಲೆ ಸುಳ್ಯ ವತಿಯಿಂದ ಸುನಾದ ಸಂಗೀತೋತ್ಸವವು ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ಎ.30 ರಂದು ನಡೆಯಿತು.
ವಿದ್ವಾನ್ ಎ.ಕಾಂಚನ ಈಶ್ವರ ಭಟ್ ದಂಪತಿಗಳು ದೀಪೋಜ್ವಲನೆ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ಸುನಾದ ಸಂಗೀತ ಕಲಾ ಶಾಲೆ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು.
ಸಂಜೆ ಬೆಂಗಳೂರು ಸಹೋದರರಾದ ವಿದ್ವಾನ್ ಎಸ್.ಅಶೋಕ್, ವಿದ್ವಾನ್ ಎಂ.ಬಿ.ಹರಿಹರನ್ ಬೆಂಗಳೂರು ಇವರಿಂದ ಹಾಡುಗಾರಿಕೆ ನಡೆಯಿತು.
ವಯಲಿನ್ ನಲ್ಲಿ ವಿದ್ವಾನ್ ಮತ್ತೂರು ಶ್ರೀನಿಧಿ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಎಚ್.ಯಸ್.ಸುಧೀಂದ್ರ ಬೆಂಗಳೂರು, ಘಟಂನಲ್ಲಿ ವಿದ್ವಾನ್ ಜಿ.ಎಸ್.ರಾಮಾನುಜಂ ಮೈಸೂರು ಭಾಗವಹಿಸಿದ್ದರು.