ಎ.19 ರಂದು ನಿಧನರಾದ ದಿ.ಹಾಸ್ಪಾರೆ ವಿಶ್ವನಾಥ ಮಣಿಯಾಣಿಯವರ ಪತ್ನಿ ಜಾನಕಿ ಹಾಸ್ಪಾರೆಯವರ ಶ್ರದ್ಧಾಂಜಲಿ ಸಭೆಯು ಎ.3೦ ರಂದು ಹಾಸ್ಪಾರೆ ಮನೆಯಲ್ಲಿ ನಡೆಯಿತು. ಶ್ರೀಮತಿ ಸುಧಾ ನಿತ್ಯಾನಂದ ಹಾಸ್ಪಾರೆ ದೀಪ ಪ್ರಜ್ವಲನೆಗೊಳಿಸಿದರು.
ಯಾದವ ಸಭಾ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಜನಾರ್ದನ ಕಣಕ್ಕೂರು ಪ್ರಾಸ್ತಾವಿಕ ಮಾತನಾಡಿದರು. ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಸಲಹಾ ಸಮಿತಿ ಅಧ್ಯಕ್ಷ ಸುಧಾಮ ಆಲೆಟ್ಟಿ ನುಡಿನಮನ ಗೈದರು.
ಈ ಸಂದರ್ಭದಲ್ಲಿ ಯಾದವ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷ ಎ.ಕೆ. ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು, ಕುಂಬ್ಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಾಂಭವಿ ದಂಪತಿಗಳು, ಕೋಶಾಧಿಕಾರಿ ರಾಮಚಂದ್ರ ಯದುಗಿರಿ, ಯಾದವ ಸಭಾ ತಾಲೂಕು ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ರಾಜೀವಿ ಪರ್ಲಿಕಜೆ, ಯಾದವ ಸಭಾ ತಾಲೂಕು ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಅಡ್ಡಬೈಲು, ಕೋಶಾಧಿಕಾರಿ ದಾಮೋದರ ಕೇನಾಜೆ, ಯಾದವ ಸಭಾ ತಾಲೂಕು ಸಮಿತಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶಾರದಾ ರಾಮನ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅರಂತೋಡು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಜಿ.ಪಂ. ಮಾಜಿ ಸದಸ್ಯೆ ಪುಷ್ಪಾವತಿ ಬಾಳಿಲ, ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರುಗಳು, ಸಿಬ್ಬಂದಿವರ್ಗ, ಆಲೆಟ್ಟಿ ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿವರ್ಗ, ಜಗದೀಶ್ ಸರಳಿಕುಂಜ, ತಾಲೂಕು ಪಂ. ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಯಾದವ ಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ಇದರ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಯಾದವ ಸಭಾ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಕೊರಗಪ್ಪ ಮಾಸ್ತರ್ ಕಣಕ್ಕೂರು, ಸುಳ್ಯ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಸುಭೋದ್ ಶೆಟ್ಟಿ, ಹಿಮಕರ ಅಡ್ತಲೆ, ಶ್ಯಾಂ ಪಾನತ್ತಿಲ, ಸುದರ್ಶನ ಪಾತಿಕಲ್ಲು ಉಪಸ್ಥಿತರಿದ್ದರು. ನಿತ್ಯಾನಂದ ಹಾಸ್ಪಾರೆ, ಕರುಣಾಕರ ಹಾಸ್ಪಾರೆ, ಜಯಲಕ್ಷ್ಮಿ ನಾರಾಯಣ, ನೇತ್ರಾವತಿ ರಾಮಚಂದ್ರ, ಕಮಲಾಕ್ಷಿ ಮೋಹನ್, ಶೋಭಾ ಅಯ್ಯನಕಟ್ಟೆ, ಚಂಚಲಾಕ್ಷಿ ಕರುಣಾಕರ ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.