ರಾಜ್ಯಒಕ್ಕಲಿಗರ ಸಂಘ ಬೆಂಗಳೂರು ಇದರ ಉದ್ದೇಶಿತ ಖಾಸಾಗಿ ವಿಶ್ವ ವಿದ್ಯಾನಿಲಯ ಸ್ಥಾಪಿಸಲು ವಿಶ್ವ ವಿದ್ಯಾನಿಲಯ ಸಂಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ಕೆ.ವಿ ಯವರ ನೇತೃತ್ವದಲ್ಲಿ ಈ ಹಿಂದೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಎ. ೨೭ ರಂದು ಕರ್ನಾಟಕ ರಾಜ್ಯ ಸರ್ಕಾರ ನೇಮಿಸಿದ ಐದು ಮಂದಿ ತಜ್ಞರ ಸಮಿತಿಯು ರಾಜ್ಯ ಒಕ್ಕಲಿಗರ ಸಂಘಕ್ಕೆ ಭೇಟಿ ನೀಡಿ, ಸಂಘದ ಆಡಳಿತದಡಿಯಲ್ಲಿ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮತ್ತು ಆಡಳಿತ ಮಂಡಳಿಯ ಸಂಪೂರ್ಣ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳ ಪರಿಶೀಲನೆ ಮಾಡಿತು. ಪರಿವಿಕ್ಷಣಾ ತಂಡದಲ್ಲಿ ಬೆಂಗಳೂರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ||ನಾರಾಯಣ ಗೌಡ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ||ಚಿದಾನಂದಗೌಡ ಕೊಳಂಬೆ, ತುಮಕೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ|| ಓ. ಅನಂತರಾಮಯ್ಯ, ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ||ಎಸ್. ಚಂದ್ರಶೇಖರ ಶೆಟ್ಟಿ ಪ್ರಸ್ತುತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು ಉನ್ನತ ಶಿಕ್ಷಣ ಪರಿಷತ್ ಕಾರ್ಯ ನಿರ್ವಾಹಕ, ನಿರ್ದೇಶಕ ಡಾ|| ಗೋಪಾಲಕೃಷ್ಣ ಜೋಶಿ ಆಗಮಿಸಿದರು.
ಸಲಹಾ ಸಮಿತಿಯ ಸದಸ್ಯರುಗಳಾದ ಡಾ. ಎಲ್ ಎಂ ಪಟ್ನಾಯಕ್ ಮಾಜಿ ಉಪ ಕುಲಪತಿಗಳು, ಡಾ. ಶಿವಪುಲೈ ಮಾಜಿ ಉಪಕುಲಪತಿಗಳು ಗೀತಂ ವಿಶ್ವವಿದ್ಯಾಲಯ, ಡಾ.ಸುಬ್ಬರೆಡ್ಡಿ ಮಾಜಿ ಉಪಕುಲಪತಿಗಳು ಮಣಿಪಾಲ ವಿಶ್ವವಿದ್ಯಾಲಯ ಸಿಕ್ಕಿಂ ಇವರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ. ಎನ್. ಬಾಲಕೃಷ್ಣ, ಉಪಾಧ್ಯಕ್ಷರಾದ ಹಾಗೂ ವಿಶ್ವವಿದ್ಯಾನಿಲಯ ಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು, ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ಜತೆ ಕಾರ್ಯದರ್ಶಿ ರಾಘವೆಂದ್ರ, ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ದೇವರಾಜು, ಹನುಮಂತರಾಯಪ್ಪ, ಉಮಾಪತಿ, ಪುಟ್ಟಸ್ವಾಮಿ, ರಾಜು, ವಿಶ್ವವಿದ್ಯಾನಿಲಯ ಸ್ಥಾಪನಾ ಸಮಿತಿಯ ನಿರ್ದೇಶಕ ಡಾ. ಉಜ್ವಲ್ ಊರುಬೈಲು ಹಾಗೂ ಸಲಹೆಗಾರರಾದ ಡಾ. ಅಶ್ವತ್, ಡಾ|| ಪ್ರಭಾಕರ್ ಹಾಗೂ ವಿಶ್ವವಿದ್ಯಾಲಯ ಸ್ಥಾಪನಾ ಸಮಿತಿಯ ವಿಶೇಷಾಧಿಕಾರಿ ಡಾ|| ಜಗನ್ನಾಥರೆಡ್ಡಿಯವರು ಉಪಸ್ಥಿತರಿದ್ದರು.