45 ಮಂದಿ ಶಿಕ್ಷಕರಿಗೆ ಏಕಕಾಲದಲ್ಲಿ ಗೌರವಾರ್ಪಣೆ
ಅಮರಮುಡ್ನೂರು ಗ್ರಾಮದ ಪೈಲಾರು ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭ ಮೆ.1 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ವಹಿಸಿದ್ದರು. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರು ಕಾರ್ಯಕ್ರಮ ಉದ್ಘಾಟಿಸಿದರು. ಶತಮಾನೋತ್ಸವದ ಸವಿನೆನಪಿಗಾಗಿ ಹೊರತಂದ “ನೂರು ಹೆಜ್ಜೆ” ಸ್ಮರಣ ಸಂಚಿಕೆಯನ್ನು ಸಾಹಿತಿ ನ್ಯಾಯವಾದಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಬಿಡುಗಡೆಗೊಳಿಸಿದರು.ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯ ದಿವಾಕರ ಪೈಲಾರು, ದಿವ್ಯ ಮಡಪ್ಪಾಡಿ, ಕೃಷ್ಣ ಪ್ರಸಾದ್ ಮಾಡಬಾಕಿಲು, ತಾ.ಪಂ. ಮಾಜಿ ಸದಸ್ಯ ರಾಧಾಕೃಷ್ಣ ಬೊಳ್ಳೂರು, ಶಿಕ್ಷಣ ಪ್ರೋತ್ಸಾಹಕಿ ಕೆ.ಎಲ್.ಪಾರ್ವತಿ ಕಡಪಳ , ದೇವಚಳ್ಳ ಕ್ಲಸ್ಟರ್ ಸಿ.ಆರ್.ಪಿ ಸಂತೋಷ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಕೆರೆಮೂಲೆ,ಶತಮಾನೋತ್ಸವ ಸಮಿತಿ ಅಧ್ಯಕ್ಷ ಜಯಶಿವ ಮಡಪ್ಪಾಡಿ, ಗೌರವಾಧ್ಯಕ್ಷ ಸದಾಶಿವ ಗೌಡಮೂಕಮಲೆ, ಕೋಶಾಧಿಕಾರಿ ಹರಿಶ್ಚಂದ್ರ ಮೋಂಟಡ್ಕ,ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಯೋಗೀಶ್ ಮಾಡಬಾಕಿಲು, ಮುಖ್ಯ ಶಿಕ್ಷಕಿ ಚಂದ್ರಾವತಿ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಯಶಿವ ಮಡಪ್ಪಾಡಿ ಸ್ವಾಗತಿಸಿದರು. ಸದಾಶಿವ ಗೌಡ ಮೂಕಮಲೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಪೂರ್ಣಿಮಾ ವಂದಿಸಿದರು. ಮನಮೋಹನ ಬಳ್ಳಡ್ಕ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಕೃಷ್ಣಪ್ಪ ಕೋಡ್ತುಗುಳಿ, ಕೋಶಾಧಿಕಾರಿ ಹರಿಶ್ಚಂದ್ರ ಬಾಬ್ಲುಬೆಟ್ಟು,ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಮೋಂಟಡ್ಕ,ಎಸ್.ಡಿ.ಎಂ.ಸಿ.ಅಧ್ಯಕ್ಷ ಯೋಗೀಶ್ ಮಾಡಬಾಕಿಲು, ಮುಖ್ಯ ಶಿಕ್ಷಕಿ ಚಂದ್ರಾವತಿ, ವಿದ್ಯಾರ್ಥಿ ನಾಯಕಿ ಕು.ವಿನ್ಯ ಹಾಗೂ ಸಮಿತಿಯ ಸದಸ್ಯರು, ವಿದ್ಯಾರ್ಥಿ ವೃಂದದವರು, ಪೋಷಕರು ಹಾಗೂ ಊರ ವಿದ್ಯಾಭಿಮಾನಿಗಳು ಭಾಗವಹಿಸಿದರು.