ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನಕ್ಕೊಳಪಟ್ಟ ಗುಳಿಗನ ಕಟ್ಟೆಯಲ್ಲಿ ಶ್ರೀ ಗುಳಿಗ ದೈವದ ನೇಮೋತ್ಸವ ಇಂದು ನಡೆಯಿತು.
ದುಗ್ಗಲಡ್ಕದ ಕೆ.ಎಫ್.ಡಿ.ಸಿ.ರಬ್ಬರ್ ತೋಟದ ಒಳಗಿರುವ ಗುಳಿಗನ ಕಟ್ಟೆಯಲ್ಲಿ ಗುಳಿಗ ದೈವದ ನೇಮೋತ್ಸವ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.
ದುಗ್ಗಲಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಸುಂದರ ರಾವ್,ಗುಳಿಗನ ಕಟ್ಟೆ ಸಮಿತಿಯ ಅಧ್ಯಕ್ಷ ದಿನೇಶ್ ಡಿ.ಕೆ.,ಕಾರ್ಯದರ್ಶಿ ಕುಸುಮಾಧರ ಎಸ್.ಎನ್., ದೈವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕುಶಾಲಪ್ಪ ಗೌಡ ಕಜೆ, ನ.ಪಂ.ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ಯತೀಶ್ ರೈ ದುಗ್ಗಲಡ್ಕ, ಸಮಿತಿಯ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.