ಭಾರತೀಯ ಭೂಸೇನೆಯಲ್ಲಿ 26 ವರ್ಷ ಸೇವೆ ಸಲ್ಲಿಸಿ, ಸೇವಾ ಅವಧಿಯಿಂದ ನಿವೃತ್ತಗೊಂಡ ನೆಲ್ಲೂರು ಕೆಮ್ರಾಜೆ ಗ್ರಾಮದ ಇಂತಿಕಲ್ಲು ಉಮೇಶ್ ಎನ್. ರವರನ್ನು ಊರವರು ಹಾಗೂ ಸ್ಥಳೀಯ ಸಂಘಸಂಸ್ಥೆಗಳ ವತಿಯಿಂದ ದುಗ್ಗಲಡ್ಕದಲ್ಲಿ ಹುಟ್ಟೂರಿಗೆ ಸ್ವಾಗತಿಸಲಾಯಿತು. ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ ಯವರು ಹಾರಾರ್ಪಣೆ ಮಾಡಿ, ಪುಷ್ಪ ನೀಡಿ ಸ್ವಾಗತಿಸಿದರು. ಬಳಿಕ ವಾಹನ ಜಾಥದ ಮೂಲಕ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದವರೆಗೆ ಕರೆದೊಯ್ಯಲಾಯಿತು. ದೇವಾಲಯದಲ್ಲಿ ಉಮೇಶ್ ರವರಿಗೆ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕ್ಕಾನರವರು ಶಾಲು ಹಾಕಿ ಸ್ವಾಗತಿಸಿ, ಶ್ರೀ ದೇವರ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಲಕ್ಷ್ಮಣ ಬೊಳ್ಳಾಜೆ, ರೆಂಜಾಳ ಜಾತ್ರೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬೇರಿಕೆ, ಪತ್ರಕರ್ತ ದಯಾನಂದ ಕೊರತ್ತೋಡಿ, ಒಡಿಯೂರು ಗ್ರಾಮ ವಿಕಾಸವಾಹಿನ ಬೊಳ್ಳಾಜೆ ಘಟ ಸಮಿತಿ ಅಧ್ಯಕ್ಷ ಗಣೇಶ್ ಬೊಳ್ಳಾಜೆ, ವೀರಾಂಜನೆಯ ಸ್ಪೋಟ್ಸ್ ಕ್ಲಬ್ ನ ಪ್ರಮೋದ್ ಬೊಳ್ಳಾಜೆ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ವೆಂಕರಮಣ ಡಿ.ಜಿ., ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ ಹಾಗೂ ಸುಬ್ರಹ್ಮಣ್ಯ ನಾಯಕ್ ಬೊಳ್ಳಾಜೆ, ಜನಾರ್ಧನ ಕೊರತ್ತೋಡಿ, ಚರಣ್ ಕೊರತ್ತೋಡಿ, ಸೀತಾರಾಮ ಚೆನ್ನಡ್ಕ, ದೇವಿಪ್ರಸಾದ್ ಚೆನ್ನಡ್ಕ, ರತ್ನಾಕರ ಮಾಪಲಕಜೆ, ಮಂಜುನಾಥ ಕಂದಡ್ಕ, ದಿನೇಶ್ ಕಿಲಾರ್ಕಜೆ, ಭಾಸ್ಕರ ರೆಂಜಾಳ, ಸತ್ಯನಾರಾಯಣ ಕಿಲಾರ್ಕಜೆ, ವಸಂತರಾಮ ಚೆನ್ನಡ್ಕ, ಯಕ್ಷಗಾನ ಹಾಸ್ಯ ಕಲಾವಿದ ಮಹೇಶ್ ಮಣಿಯಾಣಿ ದೊಡ್ಡತೋಟ, ನವೀನ ಪೈಲೂರು, ಮೋಹನ್ ನಾಯ್ಕ ರೆಂಜಾಳ, ಶಶಿಕಾಂತ ಗುಳಿಗಮೂಲೆ, ರಾಜೇಶ್ ಚೆನ್ನಡ್ಕ ಮತ್ತಿತರರು ಉಪಸ್ಥಿತರಿದ್ದರು. ರಾಜರಾಂ ಭಟ್ ಬೆಟ್ಟ ಅವರ ಮನೆಯ ಬಳಿ ಶಾಲು ಹಾಕಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ ಯವರನ್ನು ರೆಂಜಾಳ ದೇವಸ್ಥಾನದಲ್ಲಿ ಶಾಲು ಹಾಕಿ ಗೌರವಿಸಲಾಯಿತು.