ಪೈಲಾರು ದ.ಕ.ಜಿ.ಪ.ಹಿ.ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಶೈಕ್ಷಣಿಕ ವಿಚಾರ ಗೋಷ್ಠಿ ಮೆ.1 ರಂದು ನಡೆಯಿತು.
ಗೋಷ್ಠಿಯ ಅಧ್ಯಕ್ಷತೆ ಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ವಹಿಸಿದ್ದರು. ಶಿಕ್ಷಣದಲ್ಲಿ ಪೋಷಕರ ಪಾಲ್ಗೊಳ್ಳುವಿಕೆ ವಿಷಯದ ಕುರಿತು ಶಿಕ್ಷಕ ಖ್ಯಾತ ಬರಹಗಾರ ಅರವಿಂದ ಚೊಕ್ಕಾಡಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸ್ತುತತೆಯ ಬಗ್ಗೆ ಪೈಲಾರು ಶಾಲೆಯ ಸಹಶಿಕ್ಷಕಿ ಪೂರ್ಣಿಮಾ ರವರು ವಿಚಾರವನ್ನು ಮಂಡಿಸಿದರು. ಶಶಿಕಾಂತ್ ಮಿತ್ತೂರು ವಂದಿಸಿದರು. ಮನಮೋಹನ್ ಬಳ್ಳಡ್ಕ ಕಾರ್ಯಕ್ರಮ ನಿರೂಪಿಸಿದರು.