ಬೆಳ್ಳಾರೆ ಗ್ರಾಮದ ಗೌರಿಹೊಳೆ ಸಮೀಪವಿರುವ ಗೌರಿಪುರಂನಲ್ಲಿ ನೂತನವಾಗಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ನಿರ್ಮಾಣವಾಗಲಿದ್ದು, ಸಾನಿಧ್ಯದ ಸಮೀಪ ಮೇ. 26, 27ರಂದು ನಡೆಯಲಿರುವ ಚಿತ್ರಕೂಟ ಸಹಿತ ನಾಗದೇವರ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಸಭೆಯು ಮೇ. 1ರಂದು ಗೌರಿಪುರಂನಲ್ಲಿ ನಡೆಯಿತು.ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್. ಬಂಡಿಮಜಲು, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಿರಿಯ ಸಲಹೆಗಾರರು ಸೇರಿದಂತೆ ಊರಿನ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.