ಪೆರಾಜೆ ಸಮೀಪ ಪಾಲಡ್ಕ ಎಂಬಲ್ಲಿ ಐ20 ಕಾರು ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಶುಂಠಿಕೊಪ್ಪ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಐ೨೦ ಕಾರು ಪಾಲಡ್ಕ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ರಸ್ತೆಯಿಂದ ಹೊರಕ್ಕೆ ಹೋಗಿ ಡಿವೈಡರ್ಗೆ ಡಿಕ್ಕಿಯಾಯಿತು.
ಕಾರಿನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದು, ಓರ್ವ ಮಹಿಳೆ ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರಾದ ಯೂಸಫ್ ಅಂಜೀಕಾರ್, ತೇಜಸ್ ಪಾಲಡ್ಕ, ಸಲಾಂ ಪಾಲಡ್ಕ, ಅಬ್ಬಾಸ್ ಅಂಜೀಕಾರ್ ಆಸ್ಪತ್ರೆಗೆ ಸೇರಿಸಲು ನೆರವಾದರು.
ಈ ಸ್ಥಳದಲ್ಲಿ ಈ ಹಿಂದೆಯೂ ಅಪಘಾತ ನಡೆದಿದ್ದು, ಇನ್ನಾದರೂ ಸಂಬಂಧಿತ ಅಧಿಕಾರಿಗಳು ಸೂಚನಾ ಫಲಕಗಳನ್ನು ಅಳವಡಿಸಬೇಕೇಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.