ಸುಳ್ಯ ತಾಲೂಕಿನ 26 ಶಿಕ್ಷಕರು ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂ ಡಿದ್ದಾರೆ.
ಸುಳ್ಯ ಶಾಂತಿನಗರ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ವಸಂತಿಯವರು ಜಾಲ್ಸೂರು ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿಗೊಂಡಿದ್ದಾರೆ. ಮುರುಳ್ಯ ಶಾಂತಿನಗರ ಶಾಲಾ ಶಿಕ್ಷಕಿ ಶಶಿಕಲಾರವರು ಅದೇ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದಾರೆ. ಮಂಡೆಕೋಲು ಮಾರ್ಗ ಶಾಲೆಯ ಶಿಕ್ಷಕಿ ಸ್ವರ್ಣಲತಾ ಸ.ಹಿ.ಪ್ರಾ. ಶಾಲೆ ಕಾಂತಮಂಗಲ, ಪಾಂಡಿಗದ್ದೆ ಶಾಲೆಯ ಶಿಕ್ಷಕಿ ಧರ್ಮಾವತಿಯವರು ಪಡ್ಪಿನಂಗಡಿ ಶಾಲಾ ಮುಖ್ಯಶಿಕ್ಷಕಿಯಾಗಿ, ನಾಗತೀರ್ಥ ಶಾಲೆಯ ಗಿರಿಜ ಕೆ.ಆರ್. ಅದೇ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಮುಂದುವರಿಯಲಿದ್ದಾರೆ. ಮಡಪ್ಪಾಡಿ ಶಾಲೆಯ ಚಂದ್ರಶೇಖರರು ನಡುಗಲ್ಲು ಶಾಲೆಯ ಮುಖ್ಯ ಶಿಕ್ಷಕರಾಗಿ, ಕುಲ್ಕುಂದ ಶಾಲೆಯ ಲೀಲಾಕುಮಾರಿಯವರು ಪಂಜ ಶಾಲೆಯ ಮುಖ್ಯ ಶಿಕ್ಷಕಿಯಾಗಿ, ಎಣ್ಮೂರು ಶಾಲೆಯ ತೇಜಪ್ಪ ಮಾಸ್ತರ್ ಪೆರುವಾಜೆ ಶಾಲೆಯ ಮುಖ್ಯ ಶಿಕ್ಷಕರಾಗಿ, ಮಂಡೆಕೋಲು ಶಾಲೆಯ ಮಂಜುಳಾ ಎಂ.ಎಸ್. ರವರು ಅದೇ ಶಾಲೆಯ ಮುಖ್ಯಶಿಕ್ಷಕಿಯಾಗಿ, ಕಾಯರ್ತಡ್ಕ ಶಾಲೆಯ ಭುವನೇಶ್ವರಿ ಎಣ್ಮೂರು ಶಾಲೆಯ ಮುಖ್ಯ ಶಿಕ್ಷಕಿಯಾಗಿ, ಮುಳ್ಯ ಅಟ್ಲೂರು ಶಾಲೆಯ ಶಿಕ್ಷಕಿ ಧನಲಕ್ಷ್ಮಿ ಕುದ್ಪಾಜೆಯವರು ಅಡ್ಪಂಗಾಯ ಶಾಲೆಯ ಮುಖ್ಯ ಶಿಕ್ಷಕಿಯಾಗಿ, ಹರಿಹರ ಶಾಲೆಯ ಶಿಕ್ಷಕಿ ತಾರಾಮತಿಯವರು ಬಾಳುಗೋಡು ಶಾಲೆಯ ಮುಖ್ಯ ಶಿಕ್ಷಕಿಯಾಗಿ, ಸಂಪಾಜೆ ಶಾಲೆಯ ಚಂದ್ರಾವತಿ ಡಿ ಯವರು ಅದೇ ಶಾಲೆಯ ಮುಖ್ಯಶಿಕ್ಷಕಿಯಾಗಿ ಮುಂದುವರಿಯಲಿದ್ದಾರೆ. ಶಾಂತಿನಗರ ಶಾಲೆಯ ಹೇಮಲತಾ ಎಸ್ ರವರು ಕುಕ್ಕುಜಡ್ಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ, ನಡುಗಲ್ಲು ಶಾಲೆಯ ಕುಸುಮಾತಿಯವರು ಸೋಣಂಗೇರಿ ಶಾಲೆಯ ಮುಖ್ಯ ಶಿಕ್ಷಕಿಯಾಗಿ, ದೇವಚಳ್ಳ ಶಾಲೆಯ ರೂಪವಾಣಿಯವರು ಅಮರಪಡ್ನೂರು ಶಾಲೆಯ ಮುಖ್ಯಶಿಕ್ಷಕಿಯಾಗಿ, ಅರಂತೋಡು ಶಾಲೆಯ ಶಿಕ್ಷಕ ಗೋಪಾಲಕೃಷ್ಣ ಬನ ಅದೇ ಶಾಲೆಯ ಮುಖ್ಯ ಶಿಕ್ಷಕರಾಗಿ ಪದೋನ್ನತಿಯಾಗಿದ್ದಾರೆ.
ಸುಬ್ರಹ್ಮಣ್ಯ ಸ.ಹಿ.ಪ್ರಾ.ಶಾಲೆಯ ಮಾಲಿನಿ ಕೆ.ಸ್.ರವರು ಕಲ್ಮಕಾರು ಶಾಲೆಯ ಮುಖ್ಯಶಿಕ್ಷಕರಾಗಿ, ಗುತ್ತಿಗಾರು ಶಾಲೆಯ ವೀಣಾರವರು ಜಯನಗರ ಶಾಲೆಯ ಮುಖ್ಯ ಶಿಕ್ಷಕಿಯಾಗಿ, ಬೆಳ್ಳಾರೆ ಕೆ.ಪಿ.ಎಸ್. ನ ಶಿಕ್ಷಕಿ ಮೀನಾಕ್ಷಿ ಕೆ.ಆರ್. ಉಬರಡ್ಕ ಶಾಲೆಯ ಮುಖ್ಯಶಿಕ್ಷಕಿಯಾಗಿ, ಬೆಳ್ಳಾರೆ ಕೆ.ಪಿ.ಎಸ್. ಶಿಕ್ಷಕಿ ಶೇಷಮ್ಮ ಕನಕಮಜಲು ಶಾಲೆಯ ಮುಖ್ಯ ಶಿಕ್ಷಕಿಯಾಗಿ, ಐವರ್ನಾಡು ಶಾಲೆಯ ನಳಿನಾಕ್ಷಿಯವರು ನೆಟ್ಟಾರು ಶಾಲೆಯ ಮುಖ್ಯಶಿಕ್ಷಕಿಯಾಗಿ, ಅಚ್ರಪ್ಪಾಡಿ ಶಾಲೆಯ ಚಿನ್ನಸ್ವಾಮಿಯವರು ಕೋಲ್ಚಾರು ಶಾಲೆಯ ಮುಖ್ಯಶಿಕ್ಷಕಿಯಾಗಿ, ಪೆತ್ತಾಜೆ ಶಾಲೆಯ ಅರುಣ್ ಕುಮಾರ್ ತೊಡಿಕಾನ ಶಾಲೆಯ ಮುಖ್ಯಶಿಕ್ಷಕಿಯಾಗಿ, ಕಲ್ಮಡ್ಕ ಶಾಲೆಯ ವಜ್ರಾಕ್ಷಿ ಯವರು ಅದೇ ಶಾಲೆಯ ಮುಖ್ಯ ಶಿಕ್ಷಕಿಯಾಗಿ, ಬೆಳ್ತಂಗಡಿ ಸ.ಹಿ.ಪ್ರಾ.ಶಾಲೆಯ ದೇವರಾಜು ಸ.ಹಿ.ಪ್ರಾ.ಶಾಲೆಯ ಮುಡ್ನೂರು ಮರ್ಕಂಜ ಮುಖ್ಯ ಶಿಕ್ಷಕರಾಗಿ, ಪಂಜ ಶಾಲೆಯ ಶಿಕ್ಷಕಿ ಶಶಿಕಲಾ ಪುತ್ತೂರು ಬೊಬ್ಬೆಕೇರಿ ಶಾಲೆಗೆ ಮುಖ್ಯ ಶಿಕ್ಷಕರಾಗಿ ವರ್ಗಾವಣೆಯಾಗಿದ್ದಾರೆ.