ಸುಳ್ಳು ದಾಖಲೆ ಸೃಷ್ಠಿಸಿ ಪ.ಜಾತಿ ಪ್ರಮಾಣಪತ್ರ ಪಡೆಯುತ್ತಿರುವ ವಿಚಾರ : ಹೋರಾಟಕ್ಕೆ ಮೊಗೇರ ಸಂಘ ನಿರ್ಧಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮೇ.10ರಂದು ತಾಲೂಕು ಕೇಂದ್ರ ಹಾಗೂ ಮೇ.23 ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನಾ ರ್ಯಾಲಿ


ಸುಳ್ಳು ದಾಖಲೆ ಸೃಷ್ಠಿಸಿ ಪ.ಜಾತಿಯ ಪ್ರಮಾಣಪತ್ರ ಪಡೆದು ಪರಿಶಿಷ್ಟರ ಸಂವಿಧಾನಿಕ ಹಕ್ಕನ್ನು ಕಸಿದುಕೊಂಡ ಮೀನುಗಾರ ಮೊಗೇರರು ಮತ್ತು ಇತರ ಜಾತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟಕ್ಕೆ ನಿರ್ಧಾರ ಮಾಡಿರುವುದಾಗಿ ಸುಳ್ಯ ತಾಲೂಕು ಮೊಗೇರ ಸಂಘ ಹೇಳಿದೆ.

ಮೇ.2 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮೊಗೇರ ಸಂಘದ ತಾಲೂಕು ಅಧ್ಯಕ್ಷ ಕರುಣಾಕರ ಪಲ್ಲತಡ್ಕ ಮತ್ತು ಪ್ರ.ಕಾರ್ಯದರ್ಶಿ ಬಾಳಪ್ಪ ಕಳಂಜ ವಿವರ ನೀಡಿದರು. ಕಾರವಾರ ಜಿಲ್ಲೆಯ ಹಿಂದುಳಿದ ಪ್ರವರ್ಗ 1 ರಲ್ಲಿ ಬರುವ ಮೀನುಗಾರ ಮೊಗೇರ ಜಾತಿಯ ಜನರು ಸುಳ್ಳು ದಾಖಲೆ ಸೃಷ್ಠಿಸಿ ಶಾಲೆ ದಾಖಲೆಗಳನ್ನು ತಿದ್ದುಪಡಿ ಮಾಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ನೈಜ ಪರಿಶಿಷ್ಟರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಿದ್ದಾರೆ. ದ.ಕ. ಜಿಲ್ಲೆ, ಉಡುಪಿ ಮತ್ತು ಗಡಿನಾಡು ಭಾಗದಲ್ಲಿ ವಾಸಮಾಡುವ ಪ.ಜಾತಿಯಲ್ಲಿ ಬರುವ ಮೊಗೇರ ಜಾತಿಯ ಸಂವಿಧಾನಿಕ ಮೀಸಲಾತಿಯನ್ನು ಕಬಳಿಸಲು ನಡೆಸಿರುವ ಹುನ್ನಾರ ಮತ್ತು ಇತರ ಜಾತಿಯವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳುತ್ತಿರುವ ಪ್ರಕರಣದ ಬಗ್ಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಮೊಗೇರ ಸಂಘ ಮತ್ತು ದಲಿತ ಸಂಘಟನೆಗಳು ತೀರ್ಮಾನಿಸಿದೆ ಎಂದು ಹೇಳಿದರು.

ಕೇವಲ ಎರಡೇ ಜಿಲ್ಲೆಯಲ್ಲಿರುವ ಪ.ಜಾತಿಯ ಮೊಗೇರರು ಶೈಕ್ಷಣಿಕ, ಆರ್ಥಿಕ ವಾಗಿ ಮುಂದುವರಿಯುವ ಉದ್ದೇಶದಿಂದ ಬೇರೆ ಜಿಲ್ಲೆಗೆ ವಲಸೆ ಹೋದಾಗ ಸುಲಭವಾಗಿ ಜಾತಿ ಪ್ರಮಾಣ ಪತ್ರ ಪಡೆಯುವಂತಾಗಲು 1976 ರಲ್ಲಿ ಕ್ಷೇತ್ರ ನಿರ್ಬಂಧನೆಯನ್ನು ರದ್ದುಪಡಿಸಿ ಕೇಂದ್ರ ಸರಕಾರ ಆದೇಶಿಸಿತು. ಈ ಸೂಕ್ಷ್ಮ ಅರಿತುಕೊಂಡ ಕಾರವಾರದ ಮೀನುಗಾರ ಮೊಗೇರರು ಶಾಲೆಗಳಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂದಾಯ ಇಲಾಖೆಯ ಸಹಾಯವನ್ನು ಪಡೆದು ವ್ಯಾಪಕವಾಗಿ ಸುಳ್ಳು ಜಾತಿ ಪ್ರಮಾಣಪತ್ರ ವನ್ನು ಪಡೆದುಕೊಂಡು ಬಂದಿದ್ದಾರೆ. ಈಗಾಗಲೇ ಮಾಜಿ ವಿಧಾನಸಭೆ ಸದಸ್ಯರು, ಜಿ.ಪಂ. ಅಧ್ಯಕ್ಷರು, ನ್ಯಾಯಾಧೀಶರು, ಪೋಲೀಸ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಹೀಗೆ ಮುಂತಾದ ಇಲಾಖೆಗಳಲ್ಲಿ ನುಸುಳಿಕೊಂಡಿದ್ದಾರೆ. ಪರಿಶಿಷ್ಟರಿಗೆ ಸಿಗುವ ಸ್ವ ಉದ್ಯೋಗ ಯೋಜನೆಯ ಕೋಟ್ಯಾಂತರ ರೂಪಾಯಿ ಪ್ರೋತ್ಸಾಹ ಧನವನ್ನೂ ಕಬಳಿಸಿ ವ್ಯವಹಾರ ಉದ್ದಿಮೆಗಳನ್ನು ಪ್ರಾರಂಭಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ಪ್ರವರ್ಗ 1 ರಲ್ಲಿ ಬರುವ ಮೊಗೇರರಾಗಿದ್ದಾರೆ. ಇವರು ಪರಿಶಿಷ್ಟ ಜಾತಿಯವರಲ್ಲ ಎಂದು ಸ್ಪಷ್ಟಪಡಿಸಿದೆ. ಈ ಎರಡು ಜಾತಿಗಳ ಮಧ್ಯೆ ವೈವಾಹಿಕ, ಸಾಂಸ್ಕೃತಿಕ, ಸಾಮಾಜಿಕ ಯಾವುದೇ ಸಂಬಂಧವಿರುವುದಿಲ್ಲ ಎಂಬುವುದನ್ನು ಈ ಅಧ್ಯಯನ ಸಾಬೀತು ಪಡಿಸಿದೆ.

ಈ ನಿಟ್ಟಿನಲ್ಲಿ ಮೇ.10 ರಂದು ಬೆಳಗ್ಗೆ ಜಲ್ಲೆಯ ಪ್ರತೀ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ಹಾಗೂ ಮೇ.23 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೊಗೇರ ಸಂಘದ. ಪ್ರಮುಖರಾದ ನಂದರಾಜ ಸಂಕೇಶ, ಅಚ್ಚುತ ಮಲ್ಕಜೆ, ಕೇಶವ ಮಾಸ್ತರ್ ಹೊಸಗದ್ದೆ, ಗುರುವ ಪೈಲಾರು, ಪ್ರಕಾಶ್, ಸಂಜಯ ಕುಮಾರ್ ಪೈಚಾರ್ ಇದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.