ಸವಣೂರು ಕೆ.ಸೀತಾರಾಮ ರೈ ಯವರಿಗೆ ಅಭಿನಂದನಾ ಸಮಾರಂಭ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಬಾಲಕ ಮತ್ತು ಬಾಲಕಿಯರ 5 ನೇ ವರುಷದ ಡಬಲ್ಸ್ ಶೆಟಲ್ ಬ್ಯಾಡ್ ಮಿಂಟನ್ ಪಂದ್ಯಾಟ ಉತ್ಕರ್ಷ ಸಹಕಾರ ಟ್ರೋಫಿ-2022 ಮತ್ತು ‘ಸಹಕಾರ ರತ್ನ’ಪ್ರಶಸ್ತಿ ಪುರಸ್ಕೃತರಾದ ಸವಣೂರು
ಕೆ. ಸೀತಾರಾಮ ರೈ ರವರಿಗೆ ಅಭಿನಂದನಾ ಸಮಾರಂಭವು ಮೇ.1.ರಂದು ಪಂಜ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ಜರುಗಿತು.
ಅಭಿನಂದನಾ ಸಮಾರಂಭದಲ್ಲಿ ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ರವರು ಅಭಿನಂದನಾ ಭಾಷಣ ಮಾಡಿ
“ಸವಣೂರು ಸೀತಾರಾಮ ರೈ ಯವರು ವೃತ್ತಿ, ಹುದ್ದೆಗೆ ಗೌರವ ಕೊಟ್ಟು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಬಡವರ ಕಣ್ಣೀರು ಒರೆಸಿದ್ದಾರೆ.ಹಲವರನ್ನು ಆರ್ಥಿಕ ಸದೃಢರಾಗಿ ಮಾಡಿದ್ದಾರೆ. ಸಂಕಷ್ಟದಲ್ಲಿದ್ದ ಅನೇಕ ಸಹಕಾರಿ ಸಂಘಗಳು ಮತ್ತೆ ಸದೃಢಗೊಳ್ಳುವಲ್ಲಿ ಕಾರಣರಾಗಿದ್ದಾರೆ. ಈ ಗುಣಗಳು ಅವರಿಗೆ ರಕ್ತಗತವಾಗಿ ಬಂದಿದೆ.ಸಹಕಾರ ರತ್ನ ಪ್ರಶಸ್ತಿ ಅವರಿಗೆ ನೀಡಿರುವುದರಿಂದ. ಸಹಕಾರ ರತ್ನ ಪುರಸ್ಕಾರ ಪ್ರಶಸ್ತಿಗೆ ಇರುವ ಗೌರವ ಇಮ್ಮಡಿಯಾಗಿದೆ” . ಎಂದು ಹೇಳಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಸಭಾಧ್ಯಕ್ಷತೆ ವಹಿಸಿ ಮಾತನಾಡಿ
“ಸವಣೂರು ಸೀತಾರಾಮ ರೈ ರವರು ಶ್ರಮಜೀವಿ. ಸಹಕಾರ ಕ್ಷೇತ್ರಕ್ಕೆ ಅವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಒಬ್ಬ ನಿಜವಾದ ಸಾಧಕನಿಗೆ ಸಹಕಾರ ರತ್ನ ಪ್ರಶಸ್ತಿ ಸಿಕ್ಕಿದೆ. ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲು ಸಮಾಜಕ್ಕೆ ಬಹಳಷ್ಟು
ಕೊಡುಗೆಗಳನ್ನು ನೀಡಿದ್ದು ,ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಸಲ್ಲಬೇಕಾಗುತ್ತದೆ. ಅವರು ರಾಷ್ಟ್ರಪ್ರಶಸ್ತಿಗೆ ಅರ್ಹರು”ಎಂದು ಅವರು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪೂರ್ವಾಧ್ಯಕ್ಷ, ಪ್ರಸ್ತುತ ನಿರ್ದೇಶಕರಾಗಿರುವ ಚಂದ್ರಶೇಖರ ಶಾಸ್ತ್ರಿ ರವರು ಮಾತನಾಡಿ
“ಶಿಸ್ತು, ಬದ್ಧತೆ, ಪ್ರಾಮಾಣಿಕತೆ ವ್ಯಕ್ತಿತ್ವ ಸೀತಾರಾಮ ರೈ ರವರದು. ಧಾರ್ಮಿಕ ,ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಅವರು ಸವಣೂರಿನಲ್ಲಿ ಶಿಕ್ಷಣ ಕಾಶಿಯನ್ನು ನಿರ್ಮಿಸಿದ್ದಾರೆ. ಅವರು ನಮಗೆಲ್ಲರಿಗೂ ಮಾದರಿ”.ಎಂದು ಹೇಳಿದರು.
ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಸವಣೂರು ಕೆ.ಸೀತಾರಾಮ ರೈ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ
“ಸುಮಾರು 40 ವರ್ಷಗಳ ಹಿಂದೆ ನಾನು ಈ ಸಂಘದ ಸೂಪರ್ ವೈಸರ್
ಆಗಿದ್ದೆ, ಬಳಿಕ ಹುದ್ದೆಗೆ ರಾಜೀನಾಮೆ ನೀಡಿ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷನಾಗಿ ,ನಿರ್ದೇಶಕನಾಗಿದ್ದೆ ಈ ವೇಳೆ ಈ ಸಂಘ ಮತ್ತು ಇನ್ನು ಕೆಲವು ಸಂಘಗಳು ವ್ಯವಹಾರದಲ್ಲಿ ತೊಂದರೆಯಲ್ಲಿ ಸಿಲುಕಿದ್ದವು .ಆಗ ನಾನು ಕೇಂದ್ರ ಬ್ಯಾಂಕ್ ನ ವತಿಯಿಂದ ನಿರ್ದೇಶಕನಾಗಿ ಈ ಸಂಘದ ಸಮಸ್ಯೆಯನ್ನು ಸರಿಪಡಿಸಿದ್ದೆ. ಇಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಿ ಅತ್ಯಂತ ಎತ್ತರಕ್ಕೆ ಬೆಳೆದು,ಈ ಸಂಘದಿಂದ ಸುಮಾರು 5500 ರೈತ ಸದಸ್ಯರ ಬದುಕು ಅಭಿವೃದ್ಧಿಯಾಗಿದೆ ಎಂದರೆ ಇದಕ್ಕಿಂತ ದೊಡ್ಡ ಸೇವೆ ಬೇರೆ ಇಲ್ಲ. ಸಂಘದ ಸಾಧನೆಯನ್ನು ಗುರುತಿಸಿ ಎನ್.ಸಿ ಡಿ.ಸಿ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿದೆ.ಅಂದು ನಾನು ನೀಡಿದ ಸೇವೆಯನ್ನು ನೆನಪಿನಲ್ಲಿಟ್ಟು ಕೊಂಡು ಗೌರವಿಸಿ ಸನ್ಮಾನಿಸಿರುವುದು. ನನಗೆ ಅತ್ಯಂತ ಸಂತೋಷ ತಂದಿದೆ” ಎಂದು ಅವರು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಂಘದ ಆಡಳಿತ ಮಂಡಳಿ ಯವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಕವಿತಾ ಕೃಷ್ಣನಗರ ಮತ್ತು ಶ್ರೀಮತಿ ಜಯಶ್ರೀ ಪಲ್ಲೋಡಿ ಪ್ರಾರ್ಥಿಸಿದರು. ಸೋಮಶೇಖರ ನೇರಳ ನಿರೂಪಿಸಿದರು. ನೇಮಿರಾಜ ಪಲ್ಲೋಡಿ ಸ್ವಾಗತಿಸಿ ಪ್ರಸ್ತಾವನೆಗೈದರು.ಸಂಘದ ನಿರ್ದೇಶಕ ವಾಚಣ್ಣ ಕೆರೆಮೂಲೆ . ಸನ್ಮಾನ ಪತ್ರ ಓದಿದರು. ಚಂದ್ರಶೇಖರ ಇಟ್ಯಡ್ಕ ಬಹುಮಾನ ವಿಜೇತರ ಪಟ್ಟಿ ಓದಿದರು.
ಸತ್ಯದೀಪ್ ವಂದಿಸಿದರು.ಸುಳ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗ ವಿಭಾಗ ಹಾಗೂ ಬಾಲಕ, ಬಾಲಕಿಯರ ವಿಭಾಗದಲ್ಲಿ ಪಂದ್ಯಾಟ
ಜರುಗಿತು.