ಬೆಳ್ಳಾರೆಯ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ
3ನೇ ವರ್ಷದ ವಾರ್ಷಿಕೋತ್ಸವ
ಮೇ. 7ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 8.00 ಗಂಟೆಗೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಉದಯ ಕೆ.ಯವರು ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಬೆಳಿಗ್ಗೆ 8.30ರಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.00 ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು, ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತು ಪ್ರಧಾನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಸುಳ್ಯ ತಾಲೂಕು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ , ಹಿರಿಯ ಧಾರ್ಮಿಕ ಮುಖಂಡರಾದ ಮಹಾಲಿಂಗೇಶ್ವರ ಭಟ್ ಕುರುಂಬುಡೇಲು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ಇದರ ಆಡಳಿತಾಧಿಕಾರಿ ಶ್ರೀಮತಿ ಸುಹಾನ, ಎಸ್.ಟಿ.ಡಬ್ಲ್ಯೂ. ಎಂ.ಸಿ.ಎಸ್. ಸುಬ್ರಹ್ಮಣ್ಯ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈ ಪುಡ್ಕಜೆ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ
ಚಂದ್ರಶೇಖರ ಪನ್ನೆ, ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ
ಪ್ರದೀಪ್ ರೈ ಅಜ್ರಂಗಳ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಭಜನಾ ಮಂಡಳಿ ಅಧ್ಯಕ್ಷೆ
ಶ್ರೀಮತಿ ಶರ್ಮಿಳಾ ವಿ. ರೈ ತಿಳಿಸಿರುತ್ತಾರೆ.