ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರಿಂದ ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ ಭ್ರಷ್ಟಾಚಾರ ಮುಕ್ತವಾಗಿ ದ.ಕ. ಮತ್ತು ಉಡುಪಿ ಈ ಎರಡು ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತು ದೆಹಲಿಯಲ್ಲಿ ಮೇ. 29 ರಂದು ನಡೆಯಲಿರುವ ನಮ್ಮ ಊರು – ನಮ್ಮ ಹೆಮ್ಮೆ ಕಾರ್ಯಕ್ರಮದ ಪೂರ್ವಭಾವಿ ಸಭೆ ದೆಹಲಿ ಕನ್ನಡ ವಿದ್ಯಾಸಂಸ್ಥೆಯ ವಿಚಾರ ಸಂಕೀರ್ಣದಲ್ಲಿ ಮೇ.1 ರಂದು ಭಾನುವಾರ ನಡೆಯಿತು.
ದೆಹಲಿಯಲ್ಲಿ ನೆಲೆನಿಂತ ನಾವು ನಮ್ಮ ಹುಟ್ಟೂರಿನ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುವುದು ಮತ್ತು ಊರಿನ ಅಭಿವೃದ್ಧಿಗೆ ಪೂರಕವಾಗಿ ಯಾವ ರೀತಿ ಕೆಲಸ ಮಾಡಬಹುದು ಎನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ
ವಸಂತ ಶೆಟ್ಟಿ ಬೆಳ್ಳಾರೆಯವರು ಮಾತನಾಡಿ ” ರಾಷ್ಟ್ರ ರಾಜಧಾನಿಯಲ್ಲಿರುವ ನಾವು ನಮ್ಮ ಊರಿನ ನಮ್ಮ ಜನರ ಸಮಸ್ಯೆಗಳ ಕುರಿತಾಗಿ ಸ್ಪಂದಿಸಿ ಆಡಳಿತ ವ್ಯವಸ್ಥೆಯೂ ಸಮರ್ಪಕವಾಗಿ ನಡೆಯುವಂತೆ ಕೈ ಜೋಡಿಸೋಣ. ದೆಹಲಿಯಲ್ಲಿ ಯಕ್ಷಗಾನ ಅಕಾಡೆಮಿಯ ಸ್ಥಾಪನೆ, ಕಡಬ ತಾಲೂಕಿನ ನೆಟ್ಟಣದಲ್ಲಿ ಕೃಷಿ ವಿದ್ಯಾನಿಲಯ ಆರಂಭಿಸುವ ಕುರಿತು ಪ್ರಯತ್ನ ಈ ರೀತಿ ಹಲವಾರು ಜಿಲ್ಲಾವಾರು ಕಾರ್ಯಕ್ರಮಗಳ ಕುರಿತಾಗಿ ಚರ್ಚಿಸೋಣ. ಈ ಮೂಲಕ ಇತರ ಜಿಲ್ಲೆಗಳಿಗೂ ನಾವು ಮಾದರಿಯಾಗೋಣ ” ಎಂದು ಹೇಳಿದರು.
ತುಳು ಸಿರಿಯ ಮಾಜಿ ಅಧ್ಯಕ್ಷರಾದ ಡಾ. ಅವನೀಂದ್ರನಾಥ ರಾವ್ ಅವರು ಮಾತನಾಡಿ ” ಡಾ. ಯು. ಪಿ. ಶಿವಾನಂದರು ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯ. ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕು ” ಎಂದರು.
ದೆಹಲಿ ಕರ್ನಾಟಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪೂಜಾ ಪ್ರದೀಪ ರಾವ್, ದೆಹಲಿ ಕರ್ನಾಟಕ ಸಂಘದ ಖಜಾಂಚಿ ರಾಧಾಕೃಷ್ಣ, ದೆಹಲಿ ಕನ್ನಡ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎಂ. ಎಸ್.ಶಶಿಕುಮಾರ್, ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಮಾಲಿನಿ ಪ್ರಹ್ಲಾದ್, ಶ್ರೀಮತಿ ಸವಿತಾ ನೆಲ್ಲಿ, ತುಳು ಸಿರಿಯ ಉಪಾಧ್ಯಕ್ಷರಾದ ಶ್ರೀಹರಿ, ಹಿರಿಯರಾದ ಪ್ರಸಾದ್ ಶೆಟ್ಟಿ, ಮಾಧವ, ಗಿರಿಯಪ್ಪ ಪೂಜಾರಿ ಹಾಗೂ ದಕ್ಷಿಣ ಕನ್ನಡ ಉಡುಪಿ ಚಿಕ್ಕಮಗಳೂರು ಮುಂತಾದ ಹಲವಾರು ಜಿಲ್ಲೆಗಳ ಸಮಾನ ಮನಸ್ಕರು ಸೇರಿ ಭ್ರಷ್ಟಾಚಾರ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಕುರಿತಾಗಿ ತಮ್ಮ ಅನಿಸಿಕೆ ಹಾಗೂ ಪ್ರಶಂಸೆಗಳನ್ನು ವ್ಯಕ್ತಪಡಿಸಿದರು.