ಅಲ್ಲಾಹನು ಒಬ್ಬ ಮುಸಲ್ಮಾನನಿಗೆ ನೀಡಿದ 5 ಕಡ್ಡಾಯ ಕಾರ್ಯಗಳನ್ನು ಜೀವನದ ಉದ್ದಕ್ಕೂ ನಿರ್ವಹಿಸಿಕೊಂಡು ಉತ್ತಮ ಬಾಳನ್ನು ಕೊಂಡೊಯ್ಯಬೇಕು.
ಇತರರನ್ನು ಒಳಿತಿನತ್ತ ಕೊಂಡೊಯ್ಯುವಾಗ ತಾನು ಕೂಡ ಒಳಿತನ್ನು ಚಿಂತಿಸುವ ನಾಗಿರಬೇಕು ಎಂದು ಹಾಫೀಲ್ ಶೌಕತ್ ಅಲಿ ಸಖಾಫಿ ಇಂದು ರಂಜಾನ್ ಪ್ರಭಾಷಣದಲ್ಲಿ ಸಂದೇಶ ನೀಡಿದರು.
ಮೊಗರ್ಪಣೆ ಜುಮಾ ಮಸ್ಜಿದ್ ನಲ್ಲಿ ಈದ್ ನಮಾಜಿಗೆ ನೇತೃತ್ವ ವಹಿಸಿದ ಅವರು ವಿಶ್ವದ ಶಾಂತಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು.
ಈ ಸಂದರ್ಭದಲ್ಲಿ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀಫುಡ್, ಕಮಿಟಿಯ ಪದಾಧಿಕಾರಿಗಳು ಸದಸ್ಯರು, ನೂರಾರು ಮುಸಲ್ಮಾನ ಬಾಂಧವರು ಉಪಸ್ಥಿತರಿದ್ದರು.