ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯಲ್ಲಿ ಪವಿತ್ರ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಈದ್ ನಮಾಝ್ ಹಾಗೂ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ಖತೀಬರಾದ ಬಹು. ಯೂನುಸ್ ಸಖಾಫಿ ವಯನಾಡ್ ರವರ ನೇತೃತ್ವದಲ್ಲಿ ನಡೆಯಿತು.
ವಿಸ್ವಾಸಿಗಳು ರಂಝಾನಿನಲ್ಲಿ ನಡೆಸಿದ ಸತ್ಕರ್ಮಗಳನ್ನು ಮುಂದುವರಿಸಿಕೊಂಡು ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಿಸಲು ತಯಾರಾಗಬೇಕು ಎಂದು ಈದ್ ಸಂದೇಶದಲ್ಲಿ ತಿಳಿಸಿದರು. ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಸ್ಪರ ಈದ್ ಶುಭಾಶಯ ಕೋರಿದರು.