ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಇದರ ಆಶ್ರಯದಲ್ಲಿ ಪೆರಾಜೆಯ ಪಯಸ್ವಿನಿ ಸೇತುವೆ ಬಳಿ ಈಜು ತರಬೇತಿ ಶಿಬಿರ ಇಂದಿನಿಂದ ಆರಂಭಗೊಂಡಿದೆ.
ರಾಷ್ಟ್ರ ಮಟ್ಟದ ಈಜು ತರಬೇತುದಾರರಿಂದ ಶಿಬಿರ ನಡೆಯಲಿದ್ದು, ಶಿಬಿರವನ್ನು ಪೆರಾಜೆ ಶ್ರೀ ಶಾಸ್ತಾವು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಉದ್ವಾಟಿಸಿದರು.
ಈ ಸಂದರ್ಭದಲ್ಲಿ ಸಂಘಟಕರಾದ ಪೆರಾಜೆ ಅಯ್ಯಪ್ಪ ದಿಪೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಪೆರುಮುಂಡ, ನಿರ್ದೇಶಕ ರಾದ ಯುವಾನಂದ ಪೆರಂಗಜೆ ಹಾಗೂ ಪೋಷಕರು ಇದ್ದರು. ಈಜು ತರಬೇತಿ ಪೆರಾಜೆ ಪಯಸ್ವಿನಿ ಹೊಳೆಯಲ್ಲಿ ತರಬೇತಿ ನೀಡಲಾಗುತ್ತಿದೆ. ನೋಂದವಣೆಗೆ ಇನ್ನು ಒಂದು ದಿನದ ಅವಕಾಶ ಇದ್ದು ಕೂಡಲೇ 9448768830, 9448409564 ಸಂಪರ್ಕಿಸಬಹುದು.