ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾದಿಗಳ ದಟ್ಟಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಆಶ್ಲೇಷ ಪೂಜೆ ಮಾಡಿಸಲು ರಥಬೀದಿಯಲ್ಲೇ ಸರತಿ ಸಾಲು

 

ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು ಆಶ್ಲೇಷ ಬಲಿ ಪೂಜೆ ಮಾಡಿಸಲು ಸಾವಿರಾರು ಜನ ಇಂದು ಮುಂಜಾನೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತ್ತು.

ಆಶ್ಲೇಷ ಬಲಿ ಪೂಜೆ ಮಾಡಿಸಲು ಸಾವಿರಾರು ಜನ ಇಂದು ಮುಂಜಾನೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತ್ತು. ರಥಬೀದಿಯುದ್ದಕ್ಕೂ ಪೂಜಾ ರಶೀದಿ ಮಾಡಿಸಲು
ಸಾಲು ಇತ್ತೆನ್ನಲಾಗಿದೆ. ಆದರೂ ಹಲವು ಭಕ್ತರಿಗೆ ಆಶ್ಲೇಷ ಬಲಿ ಪೂಜೆಯ ಮಾಡಿಸಲು ಚೀಟಿ ಮಾಡಲು ಅವಕಾಶ ದೊರೆಯಲಿಲ್ಲ ಎನ್ನಲಾಗಿದೆ.

ಸುಬ್ರಹ್ಮಣ್ಯ ಆಶ್ಲೇಷ ಪೂಜೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಇಲ್ಲಿ ಸ್ವಲ್ಪ ಜನ ಹೆಚ್ಚಾದರೂ ಸದಾ ಸಮಸ್ಯೆಯೇ. ಇಂದು ಒಂದು ಅಂದಾಜಿನ ಪ್ರಕಾರ ಬೆಳಗ್ಗಿನ ಪಾಳಿಯಲ್ಲಿ ೧೨೫೦ ಪೂಜೆಗೆ ನಿಲ್ಲಿಸಲಾಗಿದೆ. ಕೆಲವರಿಗೆ ಪೂಜಾ ವ್ಯವಸ್ಥೆ ಆಗದಿರುವುದು ಕಂಡು ಬಂದಿದೆ. ಆಶ್ಲೇಷ ಪೂಜೆ ನಡೆಯುವಲ್ಲಿ ಜಾಗದ ಸಮಸ್ಯೆಯೂ ಇದೆ.
ಆಶ್ಲೇಷ ಪೂಜೆ ನಡೆಯುವಲ್ಲಿಗೆ ತೆರಳಬೇಕಾದರೆ ಅದರ ಮುಂಚಿತವಾಗಿ ಹೊರಗಡೆಯೂ ಒಂದು ಗಂಟೆ ಕ್ಯೂ ನಲ್ಲಿ ನಿಲ್ಲುವುದು ಅನಿವಾರ್ಯ. ಈ ಕಾರಣದಿಂದ ಭಕ್ತರು ಆಕ್ರೋಶ ತೋಡಿಕೊಳ್ಳುತ್ತಿರುವುದೂ ಕಂಡು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.