ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ದೀಪ ಬೆಳಗಿಸಿ ಉದ್ಘಾಟನೆ
ಸುಬ್ರಹ್ಮಣ್ಯದ ಕಾರ್ಸ್ಟ್ರೀಟ್ ಬಳಿ ದಿ.ಮಹಾಲಿಂಗ ರವರ ಮಾರ್ಗದರ್ಶನದಲ್ಲಿ ನಿರ್ಮಾಣವಾದ
ನೂತನ ವಸತಿಗೃಹ ‘‘ ಷಷ್ಠಿ’’ ಇಂದು ಲೋಕಾರ್ಪಣೆಗೊಂಡಿತು.
ಬೆಳಗ್ಗೆ ಶ್ರೀ ಗಣಪತಿ ಹೋಮ ನಡೆಯಿತು.ಬಳಿಕ ಶ್ರೀ ದಾಮ ಮಾಣಿಲ ಮಠದ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸಿ ವಸತಿಗೃಹ ಉದ್ಘಾಟಿಸಿದರು. ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಶ್ರೀಮತಿ ಶಾರದಾ ರವರ ಮಕ್ಕಳಾದ ಶ್ರೀಮತಿ ಸುನಿತಾ, ಶ್ರೀಮತಿ ಸುಚಿತ, ಶ್ರೀಮತಿ ರೇಖಾ, ಶ್ರೀಮತಿ ಶ್ರೀಲತಾ, ಶ್ರೀಮತಿ ಮಮತಾ, ಬಂಧುಗಳು, ಸ್ಥಳೀಯರು ಮತ್ತಿತರರು ಉಪಸ್ಥಿತರಿದ್ದರು.