ನಾಳೆ ಮೂರು ಪಂದ್ಯಾಟಗಳು; ಕೆ.ಎಸ್.ಇ.ಬಿ., ಚೆನ್ನೈ ಐ.ಒ.ಬಿ.ಎದುರಾಳಿ
ಸುಳ್ಯದಲ್ಲಿ ನಾಳೆಯಿಂದ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಆರಂಭಗೊಳ್ಳಲಿದ್ದು, ಬುಧವಾರ ಮಹಿಳಾ ತಂಡದ ಎರಡು ಮತ್ತು ಪುರುಷ ತಂಡದ ಒಂದು ಪಂದ್ಯ ನಡೆಯಲಿದೆ.
5 ಗಂಟೆಗೆ ನಡೆಯುವ ಮೊದಲ ಮಹಿಳಾ ಪಂದ್ಯದಲ್ಲಿ ಕೇರಳ ಪೊಲೀಸ್ ಮತ್ತು ಐಸಿಎಫ್ ಚೆನ್ನೈ ತಂಡಗಳು ಎದುರಾಳಿಯಾಗಿವೆ.
6 ಗಂಟೆಗೆ ನಡೆಯುವ ಎರಡನೇ ಮಹಿಳಾ ಪಂದ್ಯದಲ್ಲಿ ಎಸ್.ಆರ್.ಎಂ. ಚೆನ್ನೈ ಮತ್ತು ಕರ್ನಾಟಕ ಕ್ಲಬ್ ತಂಡಗಳು ಮುಖಾಮುಖಿಯಾಗಲಿದೆ.
7 ಗಂಟೆಗೆ ನಡೆಯುವ ಮೂರನೇ ಪುರುಷ ಪಂದ್ಯದಲ್ಲಿ ಕೆ.ಎಸ್.ಇ.ಬಿ. ಮತ್ತು ಐ.ಒ.ಬಿ. ಚೆನ್ನೈ ತಂಡಗಳು ಸೆಣಸಾಡಲಿದೆ ಎಂದು ಪಂದ್ಯಾಟದ ಸಂಘಟನಾ ಕಾರ್ಯದರ್ಶಿ ಎನ್. ಜಯಪ್ರಕಾಶ್ ರೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.