Breaking News

ಇಂದಿನಿಂದ ಸುಳ್ಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪುರುಷರ ವಿಭಾಗದಲ್ಲಿ ಲೀಗ್ ಕಂ ನಾಕ್‌ಔಟ್ ಮಾದರಿ ಪಂದ್ಯಾಟ

ಮಹಿಳೆಯರ ವಿಭಾಗದಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿ ಪಂದ್ಯಾಟ

ಪಂದ್ಯಾಟದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ ಮತ್ತು ಸುಳ್ಯ ವಾಲಿಬಾಲ್ ಅಸೋಸಿಯೇಶನ್ ನೇತೃತ್ವದಲ್ಲಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ 2022 ಇಂದಿನಿಂದ ಸುಳ್ಯದಲ್ಲಿ ಆರಂಭಗೊಳ್ಳಲಿದೆ.
ಪುರುಷರ ವಿಭಾಗದಲ್ಲಿ 6 ತಂಡಗಳು ಮತ್ತು ಮಹಿಳೆಯವರ ವಿಭಾಗದಲ್ಲಿ 4 ತಂಡಗಳು ಈ ಪಂದ್ಯಾಟದಲ್ಲಿ ಸೆಣಸಾಡಲಿವೆ. ಪುರುಷರ ವಿಭಾಗದ ಪಂದ್ಯಾಟ ಲೀಗ್ ಕಂ ನಾಕ್‌ಔಟ್ ಮಾದರಿಯಲ್ಲಿ ನಡೆಯಲಿದೆ. ಪುರುಷರ ವಿಭಾಗದಲ್ಲಿ 6 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಬಿಪಿಸಿಎಲ್ ಕೊಚ್ಚಿನ್, ಕರ್ನಾಟಕ ಪೋಸ್ಟಲ್, ಎಸ್‌ಆರ್‌ಎನ್ ಯುನಿವರ್ಸಿಟಿ ಚೆನ್ನೈ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಕೆಎಸ್‌ಇಬಿ ತಿರುವನಂತಪುರ, ಐಒಬಿ ಚೆನ್ನೈ ಮತ್ತು ಯುನೈಟೆಡ್ ಇಂಡಿಯಾ ಸ್ಪೈಕರ್‍ಸ್ ತಂಡಗಳಿವೆ. ಎರಡು ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ 2 ತಂಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೆಮಿಫೈನಲ್‌ನಲ್ಲಿ ಸೋತ 2 ತಂಡಗಳು ಮೂರನೇ ಸ್ಥಾನಕ್ಕಾಗಿ ಮೇ. 8ರಂದು ಆಡಬೇಕಾಗುತ್ತದೆ.
ಮಹಿಳೆಯವರ ವಿಭಾಗದಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯುತ್ತದೆ. ಕೇರಳ ಪೊಲೀಸ್ ತಿರುವನಂತಪುರ, ಐಸಿಎಫ್ ಚೆನ್ನೈ, ಎಸ್‌ಆರ್‌ಎಂ ಯುನಿವರ್ಸಿಟಿ ಚೆನ್ನೈ, ಕರ್ನಾಟಕ ಕ್ಲಬ್ ಬೆಂಗಳೂರು ತಂಡಗಳು ಪಾಲ್ಗೊಳ್ಳುತ್ತಿವೆ. ಇದರಲ್ಲಿ ಅಗ್ರಸ್ಥಾನಕ್ಕೇರುವ 2 ತಂಡಗಳು ಮೇ. 8ರಂದು ನಡೆಯುವ ಫೈನಲ್ ಪಂದ್ಯದಲಲ್ಲಿ ಮುಖಾಮುಖಿಯಾಗಲಿವೆ. ಉಳಿದ 2 ತಂಡಗಳು ಮೂರನೇ ಸ್ಥಾನಕ್ಕಾಗಿ ಮೇ 7ರಂದು ನಡೆಯುವ ಪಂದ್ಯಾಟದಲ್ಲಿ ಸೆಣಸಾಡಲಿವೆ.
ಮೇ. 4ರಂದು ಸಂಜೆ 5.3೦ಕ್ಕೆ ನಡೆಯುವ ಮಹಿಳೆಯರ ಮೊದಲ ಪಂದ್ಯದಲ್ಲಿ ಕೇರಳ ಪೊಲೀಸ್ ಮತ್ತು ಐಸಿಎಫ್ ಚೆನ್ನೈ ತಂಡಗಳು ಪರಸ್ಪರ ಸೆಣಸಾಡಲಿವೆ. ರಾತ್ರಿ 7. 15ಕ್ಕೆ ನಡೆಯುವ ಮಹಿಳೆಯರ 2ನೇ ಪಂದ್ಯಾಟದಲ್ಲಿ ಕರ್ನಾಟಕ ಕ್ಲಬ್ ಮತ್ತು ಎಸ್‌ಆರ್‌ಎನ್ ಯುನಿವರ್ಸಿಟಿ ತಂಡಗಳು ಆಟವಾಡಲಿವೆ. ರಾತ್ರಿ 8.45 ಕ್ಕೆ ನಡೆಯುವ ಪುರುಷರ ಮೊದಲ ಪಂದ್ಯದಲ್ಲಿ ಕೆಎಸ್‌ಇಬಿ ತಿರುವನಂತಪುರ ಮತ್ತು ಐಒಬಿ ಚೆನ್ನೈ ತಂಡಗಳು ಮುಖಾಮುಖಿಯಾಗಲಿವೆ.
ಮೇ. 5ರಂದು ಸಂಜೆ 5 ಕ್ಕೆ ನಡೆಯುವ ಪುರುಷರ 2ನೇ ಪಂದ್ಯಾಟದಲ್ಲಿ ಎಸ್‌ಆರ್‌ಎನ್ ಯುನಿವರ್ಸಿಟಿ ಮತ್ತು ಕರ್ನಾಟಕ ಪೋಸ್ಟಲ್ ತಂಡಗಳು ಸೆಣಸಲಿವೆ. ಸಂಜೆ 6.3೦ಕ್ಕೆ ನಡೆಯುವ ಮಹಿಳೆಯರ 3ನೇ ಪಂದ್ಯದಲ್ಲಿ ಕರ್ನಾಟಕ ಕ್ಲಬ್ ಮತ್ತು ಐಸಿಎಫ್ ಚೆನ್ನೈ ತಂಡಗಳು ಆಡಲಿವೆ. ರಾತ್ರಿ 7.3೦ಕ್ಕೆ ನಡೆಯುವ ಮಹಿಳೆಯರ ೪ನೇ ಪಂದ್ಯಾಟದಲ್ಲಿ ಎಸ್‌ಆರ್‌ಎನ್ ಯುನಿವರ್ಸಿಟಿ ಮತ್ತು ಕೇರಳ ಪೊಲೀಸ್ ತಂಡಗಳು ಮುಖಾಮುಖಿಯಾಗಲಿವೆ. ರಾತ್ರಿ 8.45ಕ್ಕೆ ನಡೆಯುವ ಪುರುಷರ 3ನೇ ಪಂದ್ಯಾಟದಲ್ಲಿ ಯುನೈಟೆಡ್ ಇಂಡಿಯಾ ಸ್ಪೈಕರ್ಸ್ ಮತ್ತು ಕೆಎಸ್‌ಇಬಿ ತಿರುವನಂತಪುರ ತಂಡಗಳು ಅಖಾಡಕ್ಕಿಳಿಯಲಿವೆ. ರಾತ್ರಿ 1೦ ಗಂಟೆಗೆ ನಡೆಯುವ ಪುರುಷರ 4ನೇ ಪಂದ್ಯಾಟದಲ್ಲಿ ಬಿಪಿಸಿಲ್ ಕೊಚ್ಚಿ ಮತ್ತು ಕರ್ನಾಟಕ ಪೋಸ್ಟಲ್ ತಂಡಗಳು ಮುಖಾಮುಖಿಯಾಗಲಿದೆ.
ಮೇ. 6ರಂದು ಸಂಜೆ 5.3೦ಕ್ಕೆ ನಡೆಯುವ ಮಹಿಳೆಯರ ವಿಭಾಗದ 5ನೇ ಪಂದ್ಯಾಟದಲ್ಲಿ ಕರ್ನಾಟಕ ಕ್ಲಬ್ ಮತ್ತು ಕೇರಳ ಪೊಲೀಸ್ ತಂಡಗಳು ಸೆಣಸಲಿವೆ. 6.3೦ಕ್ಕೆ ನಡೆಯುವ ಮಹಿಳೆಯರ 6ನೇ ಪಂದ್ಯಾಟದಲ್ಲಿ ಐಸಿಎಫ್ ಮತ್ತು ಎಸ್‌ಆರ್‌ಎನ್ ಯುನಿವರ್ಸಿಟಿ ತಂಡಗಳು ಸೆಣಸಾಡಲಿವೆ. ರಾತ್ರಿ 7.45ಕ್ಕೆ ನಡೆಯುವ ಪುರುಷರ ವಿಭಾಗದ ೫ನೇ ಪಂದ್ಯದಲ್ಲಿ ಬಿಪಿಸಿಎಲ್ ಮತ್ತು ಎಸ್‌ಆರ್‌ಎನ್ ಯುನಿವರ್ಸಿಟಿ ತಂಡಗಳು ಮುಖಾಮುಖಿಯಾಗಲಿದ್ದು, ರಾತ್ರಿ 9 ಗಂಟೆಗೆ ನಡೆಯುವ ಪುರುಷರ ವಿಭಾಗದ 6ನೇ ಪಂದ್ಯದಲ್ಲಿ ಯುನೈಟೆಡ್ ಇಂಡಿಯಾ ಸ್ಪೈಕರ್‍ಸ್ ಮತ್ತು ಐಒಡಿ ಚೆನ್ನೈ ತಂಡಗಳು ಸ್ಪರ್ಧಿಸಲಿದೆ.
ಮೇ. 7ರಂದು ಸಂಜೆ 6 ಗಂಟೆಗೆ ಮಹಿಳೆಯರ ವಿಭಾಗದ 7ನೇ ಪಂದ್ಯ ನಡೆಯಲಿದ್ದು, 3ನೇ ಸ್ಥಾನಕ್ಕಾಗಿ ಅಂಕಗಳಿಕೆಯಲ್ಲಿ 3 ಮತ್ತು 4ನೇ ಸ್ಥಾನ ಪಡೆದ ತಂಡಗಳೊಳಗೆ ಸ್ಪರ್ಧೆ ನಡೆಯಲಿದೆ. ರಾತ್ರಿ 7.3೦ಕ್ಕೆ ಪುರುಷರ ವಿಭಾಗದ ಮೊದಲ ಸೆಮಿಫೈನಲ್ ನಡೆಯಲಿದ್ದು, ಎ ವಿಭಾಗದ ಅಗ್ರಸ್ಥಾನಿ ಮತ್ತು ಬಿ ವಿಭಾಗದ ದ್ವಿತೀಯ ಸ್ಥಾನಿ ನಡುವೆ ಪಂದ್ಯಾಟ ನಡೆಯಲಿದೆ. ರಾತ್ರಿ 9 ಗಂಟೆಗೆ ಬಿ ಗುಂಪಿನ ಅಗ್ರಸ್ಥಾನಿ ಮತ್ತು ಎ ಗುಂಪಿನ ದ್ವಿತೀಯ ಸ್ಥಾನಿ ನಡುವೆ ಸೆಮಿಫೈನಲ್ ನಡೆಯಲಿದೆ.
ಮೇ.8ರಂದು ಸಂಜೆ 6 ಗಂಟೆಗೆ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನಿಯಾದ ೨ ತಂಡಗಳ ನಡುವೆ ಫೈನಲ್ ನಡೆಯಲಿದೆ.7.30 ಕ್ಕೆ ಪುರುಷರ ವಿಭಾಗದಲ್ಲಿ 3ನೇ ಸ್ಥಾನಕ್ಕಾಗಿ ಸೆಮಿಫೈನಲ್‌ನಲ್ಲಿ ಸೋತ 2 ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ. ರಾತ್ರಿ 11 ಗಂಟೆಗೆ ಪುರುಷರ ವಿಭಾಗದ ಫೈನಲ್ ಪಂದ್ಯ ನಡೆಯಲಿದೆ.
ಪಂದ್ಯಾಟದ ಸಂಘಟನಾ ಕಾರ್ಯದರ್ಶಿ ಎನ್. ಜಯಪ್ರಕಾಶ್ ರೈ, ನಿಯಂತ್ರಣ ಮಂಡಳಿ ಚೆಯರ್‌ಮೆನ್ ಸೆಬಾಸ್ಟಿಯನ್ ಜಾರ್ಜ್, ಕರ್ನಾಟಕ ವಾಲಿಬಾಲ್ ಎಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಕೆ. ನಂದಕುಮಾರ್ ಹಾಗೂ ತಾಂತ್ರಿಕ ಮಂಡಳಿ ಚೆಯರ್‌ಮೆನ್ ಕೆ. ವೀರಸ್ವಾಮಿ ನೇತೃತ್ವದಲ್ಲಿ ಪಂದ್ಯಾಟಗಳು ನಡೆಯಲಿವೆ.

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.