ತೂಫಾನ್ ವಾಹನ ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರರು ಗಂಭೀರ ಗಾಯಗೊಂಡ ಘಟನೆ ಇಂದು ಕಲ್ಲುಗುಂಡಿ ಸಮೀಪ ಗೂನಡ್ಕ ಮಾಣಿ-ಮೈಸೂರು ಹೆದ್ದಾರಿಯಲ್ಲಿ ವರದಿಯಾಗಿದೆ.
ದೊಡ್ಡಡ್ಕ ನಿವಾಸಿ ವಾರಿಸ್ ಹಾಗೂ ಅಶ್ವಿದ್ ಗಾಯಗೊಂಡ ಯುವಕರು. ಯುವಕರು ದೊಡ್ಡಡ್ಕ ಬಳಿಯಿಂದ ಸುಳ್ಯದತ್ತ ಬರುತ್ತಿದ್ದು, ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿ ಹೊಡೆಯಿತು. ಸ್ಥಳೀಯರು ಯುವಕರನ್ನು ಸುಳ್ಯ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯಲಾಯಿತೆಂದು ತಿಳಿದುಬಂದಿದೆ.