ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಆಶ್ರಯದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಹಳೆವಿದ್ಯಾರ್ಥಿ ಸಂಘ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆ, ಯುವ ಸೇವಾ ಮತ್ತು ಕ್ರೀಡಾ ಸಂಘ ವಾಲ್ತಾಜೆ, ಯಶಸ್ವಿನಿ ಮಹಿಳಾ ಮಂಡಲ ವಾಲ್ತಾಜೆ ಇವರ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮೇ. ೧ರಂದು ಬೆಳಿಗ್ಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆಯಲ್ಲಿ ನಡೆಯಿತು.
ದೈವನರ್ತಕರಾಗಿರುವ ಶೇಷಪ್ಪ ಅಜಿಲ ವಾಲ್ತಾಜೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಡಿ. ಎಮ್.ಸಿ ಇದರ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ದಾಮೋಧರ ಮೀನಾಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕೃಷಿಕ ತಿರುಮಲೇಶ್ವರ ಗೌಡ ಮುಂಡೋಡಿ ಮತ್ತು ಯುವ ಸೇವಾ ಮತ್ತು ಕ್ರೀಡಾ ಸಂಘದ ಕಾರ್ಯದರ್ಶಿ ಮನೋಜ್ ಗುಡ್ಡೆ ಉಪಸ್ಥಿತರಿದ್ದು ಶುಭಹಾರೈಸಿದರು. ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಅಧ್ಯಕ್ಷರಾಗಿರುವ ನಿರಂಜನ್ ಕಡ್ಲಾರು ವೇದಿಕೆಯಲ್ಲಿದ್ದರು. ಹಿತೇಶ್, ಚಂಬಶ್ರೀ, ಯಜ್ಞಶ್ರೀ ಪ್ರಾರ್ಥಿಸಿದರು. ಪ್ರಮೀಳಾ ಕೆ. ಸ್ವಾಗತಿಸಿದರು.
ಪ್ರವೀಣ ಕಾಟೂರುರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರತೀಕ್ ಕಂದ್ರಪ್ಪಾಡಿ ವಂದಿಸಿದರು. ಸೌಮ್ಯ.ಸಿ.ಡಿ. ಎಲಿಮಲೆ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಪದಾಧಿಕಾರಿಗಳು ಮತ್ತು ಶಿಬಿರಾರ್ಥಿಗಳು ಹಾಗೂ ಅವರ ಪೋಷಕರು ಮತ್ತು ಊರವರು ಉಪಸ್ಥಿತರಿದ್ದರು.