ತೋಟಗಾರಿಕೆ ಇಲಾಖೆ ಸುಳ್ಯ ವತಿಯಿಂದ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಸಹಯೋಗದೊಂದಿಗೆ ೭೫ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರೈತರಿಗೆ ” ಲಿಕ್ವಿಡ್ ಗೊಬ್ಬರ ಬಳಕೆ” ಬಗ್ಗೆ ಮಾಹಿತಿ ಕಾರ್ಯಕ್ರಮ ಎ.೨೯ ರಂದು ಎ.ಪಿ. ಎಂ. ಸಿ ಸಭಾಭವನದಲ್ಲಿ ನಡೆಯಿತು.
ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡುರವರು ದೀಪಬೆಳಗಿಸಿ ಉದ್ಘಾಟಿಸಿ ರೈತರು ತಮ್ಮ ತಾಂತ್ರಿಕತೆ ಯನ್ನು ಬದಲಾಯಿಸುವ ಅವಶ್ಯಕತೆ ಇದೆ ಇಲಾಖೆ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪಗೌಡ ಕಣ್ಕಲ್ ವಹಿಸಿದ್ದು ಎಫ್. ಪಿ. ಓ ದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ ರೈತರು ಇಂತಹ ತರಬೇತಿಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ಮಾಹಿತಿ ಪಡೆದಾಗ ರೈತನ ಕೃಷಿ ವೆಚ್ಚ ಕಡಿಮೆಯಾಗಿ ಹೆಚ್ಚು ಆದಾಯ ಪಡೆಯಲು ಸಾಧ್ಯವೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸಿ.ಪಿ.ಸಿ. ಆರ್.ಐ ನ ವಿಜ್ಞಾನಿ ಡಾ. ಭವಿಷ್ ರವರು ಸುಮಾರು ೨ ಗಂಟೆಗಳ ಕಾಲ ಅತ್ಯುತ್ತಮವಾಗಿ ಲಿಕ್ವಿಡ್ ಗೊಬ್ಬರ ಬಳಕೆ ಮತ್ತು ಕಡಿಮೆ ವೆಚ್ಚದ ಬಗ್ಗೆ ಮಾಹಿತಿ ನೀಡಿದರು ಸುಮಾರು ೧೦೦ ಜನ ಆಶಕ್ತ ರೈತರು ಭಾಗವಹಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಸುಹಾನ ರವರು ಎಲ್ಲರನ್ನು ಸ್ವಾಗತಿಸಿ ಇಲಾಖಾ ಯೋಜನಾ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಸಹಾಯಕ ತೋಟಗಾರಿಕಾ ಅಧಿಕಾರಿ ಶ್ರೀ ಅರಬಣ್ಣ ಪೂಜಾರಿಯವರು ತಿಳಿಸಿದರು.
ಇಲಾಖಾಧಿಕಾರಿ ಶ್ರೀಮತಿ ಮಧುಶ್ರೀ ಧನ್ಯವಾದಗಳನ್ನು ನೀಡಿದರು, ರೈತ ಉತ್ಪಾದಕ ಸಂಸ್ಥೆಯ ಎಲ್. ಆರ್. ಪಿ ಶ್ರೀ ಕೀರ್ತನ್ ರವರು ಕಾರ್ಯಕ್ರಮ ನಿರೂಪಿಸಿದರು.
ತರಬೇತಿ ನಂತರ ಎಲ್ಲಾ ರೈತರಿಗೆ ನೀರಿನಲ್ಲಿ ಕರಗುವ ರಸಾವರಿ ಗೊಬ್ಬರವನ್ನು ರೈತರಿಗೆ ತೋಟಗಾರಿಕಾ ಇಲಾಖೆಯಿಂದ ತಲಾ೧೦ ಕಿಲೋದಂತೆ ವಿತರಿಸಲಾಯಿತು.