ಪಂದ್ಯಾಟ ತಡವಾಗಿ ಆರಂಭ: ಮೊದಲ ಪಂದ್ಯ ರಾತ್ರಿ 8 ಗಂಟೆಗೆ ಆರಂಭ
ಸುಳ್ಯದಲ್ಲಿ ಹಲವು ತಾಸು ನಿರಂತರ ಮಳೆ ಸುರಿದು ಕ್ರೀಡಾಂಗಣ ಒದ್ದೆಯಾದ ಕಾರಣ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಮೊದಲ ದಿನದ ಪಂದ್ಯ ತಡವಾಗಿ ಆರಂಭಗೊಳ್ಳುತ್ತಿದೆ.
ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಇಂದು ಆರಂಭಗೊಳ್ಳಬೇಕಿದ್ದು, ಉದ್ಠಾಟನಾ ಸಮಾರಂಭ ಮತ್ತು ಮಹಿಳಾ ತಂಡದ ಎರಡು ಹಾಗೂ ಪುರುಷ ತಂಡದ ಒಂದು ಪಂದ್ಯ ನಡೆಯಬೇಕಿತ್ತು.
ಆದರೆ ಅಪರಾಹ್ನದಿಂದಲೇ ಇಂದು ಸುಳ್ಯದಲ್ಲಿ ಮಳೆಯ ವಾತಾವರಣವಿದ್ದು, ಸಂಜೆಯಿಂದ ಧಾರಾಕಾರ ಮಳೆ ಆರಂಭವಾಗಿ ಹಲವು ತಾಸು ಸುರಿಯತೊಡಗಿತು. ಕ್ರೀಡಾಂಗಣ ಪೂರ್ತಿ ಒದ್ದೆಯಾಯಿತು. ಈ ಹಿನ್ನೆಲೆಯಲ್ಲಿ ತುರ್ತು ಸಭೆ ಸೇರಿದ ಪಂದ್ಯಾಟದ ನಿಯಂತ್ರಣ ಮಂಡಳಿ, ತಾಂತ್ರಿಕ ಮಂಡಳಿ, ವಾಲಿಬಾಲ್ ಅಸೋಸಿಯೇಶನ್ ಅಧಿಕಾರಿಗಳು, ಸಂಘಟಕರು ಮುಂದಿನ ಕ್ರಮದ ಬಗ್ಗೆ ಸಮಾಲೋಚಿಸಿದರು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕ್ರೀಡಾಂಗಣ ಒಣಗಿಸುವ ಕಾರ್ಯಕ್ಕೆ ಮುಂದಾದರು.
ಇಂದು 8 ಗಂಟೆಯಿಂದ ಪಂದ್ಯಗಳು ಆರಂಭವಾಗಲಿದೆ. ಮೊದಲ ಮಹಿಳಾ ಪಂದ್ಯದಲ್ಲಿ ಕೇರಳ ಪೊಲೀಸ್ ಮತ್ತು ಐಸಿಎಫ್ ಚೆನ್ನೈ ತಂಡಗಳು ಹಾಗೂ ಎರಡನೇ ಪಂದ್ಯದಲ್ಲಿ ಎಸ್.ಆರ್.ಎಂ. ಚೆನ್ನೈ ಮತ್ತು ಕರ್ನಾಟಕ ಕ್ಲಬ್ ತಂಡಗಳು ಮುಖಾಮುಖಿಯಾಗಲಿದೆ.
ಪುರುಷರ ಪಂದ್ಯದಲ್ಲಿ ಕೆ.ಎಸ್.ಇ.ಬಿ ತಿರುವನಂತಪುರ ಮತ್ತು ಐ.ಒ.ಬಿ. ಚೆನ್ನೈ ತಂಡಗಳು ಸೆಣಸಾಡಲಿದೆ. ಇಂದು ಉಚಿತ ಪ್ರವೇಶ ಎಂದು ಸಂಘಟಕರು ತಿಳಿಸಿದ್ದಾರೆ.