ಮದುವೆ ಮನೆಯಲ್ಲಿ ವಾಳಗ, ಆರ್ಕೆಸ್ಟ್ರಾ ಸಾಮಾನ್ಯವಾಗಿ ಕಂಡು ಬರುತ್ತಿದೆಯಾದರೂ ನಾಲ್ಕೂರು ಗ್ರಾಮದ ಪಾಲ್ತಾಡು ಕಮಲಾಕ್ಷ ಗೌಡರ ಮನೆಯ ಮದುವೆಯಲ್ಲಿ ಮೊಳಗಿದ್ದು ಮಾತ್ರ ಭಜನೆಯ ಸುಶ್ರಾವ್ಯ ಗಾಯನ.
ನಾಲ್ಕೂರು ಗ್ರಾಮದ ಪಲ್ತಾಡು ಕಮಲಾಕ್ಷ ಗೌಡ ಮತ್ತು ಹೇಮಲತಾ ದಂಪತಿಯ ಪುತ್ರ ವಿನೂಪ ಮತ್ತು ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಜಾಡಿಮನೆ ಬಾಬು ಗೌಡ ಮತ್ತು ಶ್ರೀಮತಿ ಮೋಹಿನಿ ದಂಪತಿಯ ಪುತ್ರಿ ಲತಾಶ್ರೀಯವರ ವಿವಾಹವು ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದ ಸಿದ್ಧಿದಾತ್ರಿ ಸಭಾಭವನದಲ್ಲಿ ಮೆ. 4ರಂದು ನಡೆದಿತ್ತು. ಈ ಸಂದರ್ಭದಲ್ಲಿ ಮರಕತ ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.