ಸುಬ್ರಹ್ಮಣ್ಯ: ಸಿಬ್ಬಂದಿಗಳ ವಜಾ ಖಂಡಿಸಿ ಸಾಂಕೇತಿಕ ಪ್ರತಿಭಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪಂಚ ಪರ್ವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 27 ಜನ ಮಲೆಕುಡಿಯರಿಗೆ ತಿಂಗಳ ವೇತ‌ನ ನೀಡದೇ ಏಕಾಏಕಿ ಕೆಲಸದಿಂದ ವಜಾ ಮಾಡಿದ್ದನ್ನು ಖಂಡಿಸಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ವಿರುದ್ದ ಮೇ.4 ರಂದು ಸಾಂಕೇತಿಕ  ಪ್ರತಿಭಟನೆ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪಂಚ ಪರ್ವ ವಿಭಾಗದಲ್ಲಿ ಕಳೆದ ಎರಡೂವರೆ ವರ್ಷದಿಂದ ರಥ ಕಟ್ಟುವುದು, ಪರ್ವ ಸೇವೆ ಸೇರಿ ಹಲವು ಕೆಲಸಗಳನ್ನು 27 ಜನ ಮಲೆಕುಡಿಯರು ಮಾಡುತ್ತಿದ್ದರು. ಇವರಿಗೆ
ಎರಡು ತಿಂಗಳ ವೇತ‌ನ ಕೂಡ ನೀಡದೇ ಏಕಾಏಕಿ  ಮಲೆಕುಡಿಯರನ್ನು ಕೆಲಸದಿಂದ ವಜಾ ಮಾಡಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದನ್ನು ಇಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿರುದ್ಧ ಸಾಂಕೇತಿಕ  ಪ್ರತಿಭಟನೆ ನಡೆಸಿದ್ದಾರೆ.

ಬಳಿಕ ವ್ಯವಸ್ಥಾಪನಾ ‌ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರ ಬಳಿ ತೆರಳಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ಎರಡು ದಿನಗಳ ಒಳಗೆ ಕೆಲಸಕ್ಕೆ ನೇಮಿಸದೇ ಇದ್ರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಧ್ಯಕ್ಕೆ  ಮನವಿ ಹಿನ್ನೆಲೆಯಲ್ಲಿ ಕಾರ್ಯನಿರ್ವಾಹಣಾಧಿಕಾರಿಗೆ ಸೂಚಿಸಿ ವಜಾ ಮಾಡಿರುವ ಮಲೆಕುಡಿಯರನ್ನು ಕೆಲಸಕ್ಕೆ ನೇಮಿಸುವುದಾಗಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರು ಭರವಸೆಯನ್ನು ನೀಡಿರುವುದಾಗಿ ತಿಳಿದುಬಂದಿದೆ. ಕಾರ್ಯನಿರ್ವಹಣಾಧಿಕಾರಿ ದೇವಸ್ಥಾನದಲ್ಲಿ ಇರದ ಕಾರಣ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತ ಅವರಿಗೆ ಮನವಿ ನೀಡಲಾಯಿತು.


ಕುಕ್ಕೆ ಶ್ರೀ  ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮತಿ ಸದಸ್ಯ ಕಿಶೋರ್ ಶಿರಾಡಿ,
ಪದ್ಮಕುಮಾರ ಗುಂಡಡ್ಕ, ನರಸಿಂಹ ಮಾಣಿ, ಕುಕ್ಕೆ ಸುಬ್ರಹ್ಮಣ್ಯ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಅಶೋಕ ಆಚಾರ್ಯ,  ಸಚಿನ್ ವಳಲಂಬೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.