ಇಂದು ಮುಂಜಾನೆ ಮಳೆ ನಡುವೆಯೂ ನಡೆದ ನಡು ಬಂಡಿಉತ್ಸವ
ಕುಕ್ಕನೂರು ಶ್ರೀ ಕಿನ್ನಿಮಾಣಿ ಪೂಮಾಣಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ 3 ಗಂಟೆಯಿಂದ ನಡು ಬಂಡಿಉತ್ಸವ, ಸಿಡಿಮದ್ದು ಪ್ರದರ್ಶನ ನಡೆಯಿತು.
ಕಳೆದ ಎರಡು ವರ್ಷಗಳಿಂದ ಕೊರೊನಾ ವೈರಸ್ ಕಾರಣದಿಂದ ಜಾತ್ರಾ ಸಂಭ್ರಮವನ್ನು ಕಳೆದುಕೊಂಡಿದ್ದ ಜನರಿಗೆ ಮಳೆರಾಯನಿಂದ ಅಡ್ಡಿಯಾಯಿತಾದರೂ ನೆರೆದಿದ್ದ ಭಕ್ತರ ಉತ್ಸಾಹಕ್ಕೆ ಕುಂದು ಬರಲಿಲ್ಲ.
ಕೆಲವರು ಮಳೆಯಲ್ಲೇ ನೆನೆದುಕೊಂಡು, ಇನ್ನೂ ಕೆಲವರು ಛತ್ರಿಯನ್ನು ಹಿಡಿದುಕೊಂಡು ಉತ್ಸವದಲ್ಲಿ ಭಾಗಿಯಾದರು.
ಇಂದು ಮುಂಜಾನೆ 6 ಗಂಟೆಯಿಂದ ಕಿರಿಯರ ನೇಮ ನಡೆಯಲಿದೆ.
ಬೆಳಿಗ್ಗೆ 10.30 ಕ್ಕೆ ನಾಯರ್ ನೇಮ , ಹರಿಕೆ, ಕಾಣಿಕೆ ಸ್ವೀಕಾರ,
ಸಾರ್ವಜನಿಕ ಅನ್ನಸಂತರ್ಪಣೆ, ಸಂಕ್ರಮಣ ಪೂಜೆ ಹಾಗೂ ಸಮಾರಾಧನೆ ನಡೆಯಲಿದೆ.
ನಾಳೆ ಬೆಳಿಗ್ಗೆ 7ಕ್ಕೆ ವಾಲಸಿರಿ , ಕಡೆ ಬಂಡಿ ಉತ್ಸವ , ಹಿರಿಯರ ನೇಮ , ಹರಿಕೆ, ಕಾಣಿಕೆ ಸ್ವೀಕಾರ , ಆರಾಟ , ಧ್ವಜಾರೋಹಣ, ಅಂಬು ಕಾಯಿ ಹಣ್ಣು ಕಾಯಿ ನಡೆಯಲಿದೆ.