ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್ ಉಪಾಧ್ಯಕ್ಷರಾಗಿ ಸಹಕಾರಿ ಧುರೀಣ ಪಿ.ಎಸ್.ಗಂಗಾಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಬೀರಾ ಮೊಯ್ದೀನ್ ಕನಕಮಜಲುರವರ ನಿಧನದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಸುಳ್ಯದಲ್ಲಿ ಉದ್ಯಮಿಯಾಗಿರುವ ಪಿ.ಎಸ್. ಗಂಗಾಧರ್ ರವರು ಸುಳ್ಯ ಶ್ರೀ ವೆಂಕಟರಮಣ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿದ್ದಾರೆ. ಉಬರಡ್ಕ ಮಿತ್ತೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿ, ಸುಳ್ಯ ಪಯಸ್ವಿನಿ ಜೇಸಿಸ್ ಪೂರ್ವಾಧ್ಯಕ್ಷರಾಗಿ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷರಾಗಿ, ಕೆ.ವಿ.ಜಿ. ಸುಳ್ಯ ಹಬ್ಬದ ಸಮಾಜ ಸೇವಾ ಸಂಘದ ನಿರ್ದೇಶಕರಾಗಿ, ಮಾಜಿ ಕೋಶಾಧಿಕಾರಿಯಾಗಿ, ಮಿತ್ತೂರು ಉಳ್ಳಾಕುಲು ನಾಯರ್ ದೈವಗಳ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಯಾಗಿ, ಉಬರಡ್ಕ ನರಸಿಂಹ ಶಾಸ್ತಾವು ದೇವಾಲಯದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಯಾಗಿ, ಉಬರಡ್ಕ ಮಿತ್ತೂರು ಕೊಡಿಯಾಲಬೈಲು ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿಯ ಉಪಾಧ್ಯಕ್ಷ ರಾಗಿ, ಗೌಡರ ಯುವ ಸೇವಾ ಸಂಘದ ಸ್ಥಾಪಕ ನಿರ್ದೇಶಕರಾಗಿ, ಮಾಜಿ ಉಪಾಧ್ಯಕ್ಷರಾಗಿ, ಮಹಾತ್ಮಾ ಗಾಂಧಿ ಮಲ್ನಾಡು ವಿದ್ಯಾಸಂಸ್ಥೆ ಗಳ ಮಾಜಿ ಸಂಚಾಲಕರಾಗಿ, ಸ.ಹಿ.ಪ್ರಾ. ಶಾಲೆ ಉಬರಡ್ಕ ಮಿತ್ತೂರು ಇದರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಯಾಗಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಗಿ, ಉಬರಡ್ಕ ಮಿತ್ತೂರು ಸಹಕಾರಿ ಸಹಕಾರಿ ಸಂಘದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.