ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಛೇರಿ ಅಧೀಕ್ಷಕ ಎ.30 ರಂದು ನೀವೃತ್ತಿಗೊಂಡಿದ್ದು ಅವರನ್ನು ಮೇ.1 ರಂದು ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು.
ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಅವರುಗಳು ಸ್ಮರಣಿಕೆ ನೀಡಿ ಬೀಳ್ಕೊಟ್ಟರು. ನಿವೃತ್ತಿ ಗೊಂಡ ಹಿನ್ನೆಲೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಅವರು ದೇವಸ್ಥಾನದ ಸಿಬ್ಬಂದಿಗಳಿಗೆ, ಸ್ನೇಹಿತ ಬಂಧುಗಳಿಗೆ ಸತ್ಕಾರ ಕೂಟ ಎರ್ಪಡಿಸಿದ್ದು ಈ ಸಂದರ್ಭ ಮಾಜಿ ಉದ್ಯೋಗಿಗಳು, ವ್ಯವಸ್ಥಾಪನಾ ಸಮಿತಿಯವರು ಮತ್ತಿತರರು ಭಾಗವಹಿಸಿದ್ದರು.