ಆಲೆಟ್ಟಿ ಗ್ರಾಮದ ಕುಡೆಕಲ್ಲು ಕುಟುಂಬದ ಆಡಳ್ತೆದಾರ ವಿಶ್ವನಾಥ ಗೌಡ ಕುಡೆಕಲ್ಲು ರವರ ಮೈಂದೂರು ಮನೆಯಲ್ಲಿ ಶ್ರೀ ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲ ಮೆ.4 ರಂದು ನಡೆಯಿತು. ಮೆ.3 ರಂದು ರಾತ್ರಿ ಕೂಡಿ ಮರುದಿನ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲವು ನಡೆಯಿತು. ಕುಡೆಕಲ್ಲು ಮನೆತನದ ಹಿರಿಯ ಕಿರಿಯ ಸದಸ್ಯರು ಹಾಗೂ ಊರಿನ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.