ರಾಷ್ಟೀಯ ವಾಲಿಬಾಲ್ ಚಾಂಪಿಯನ್ ಶಿಪ್ ಎರಡನೇ ದಿ‌ನಕ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ರೋಮಾಂಚಕಾರಿ ಹೋರಾಟದಲ್ಲಿ‌ ಎಸ್.ಆರ್.ಎಂ. ಮಣಿಸಿ ಕರ್ನಾಟಕ ಪೋಸ್ಟಲ್ ಶುಭಾರಂಭ

ಕ್ರೀಡಾಭಿಮಾನಿಗಳ ಮನಸೂರೆಗೊಂಡ ಉಭಯ ಕಪ್ತಾನರ ಆಟ

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ನ ಪುರುಷರ ವಿಭಾಗದ ಇಂದಿನ ಮೊದಲ ಮತ್ತು ಟೂರ್ನಿಯ ಎರಡನೇ ಪಂದ್ಯಾಟದಲ್ಲಿ ಕರ್ನಾಟಕ ಪೋಸ್ಟಲ್ ತಂಡ ಶುಭಾರಂಭ ಮಾಡಿದೆ.

ಪುರುಷರ ವಿಭಾಗದ ಎ ಗುಂಪಿನಲ್ಲಿ ಕರ್ನಾಟಕ ಪೋಸ್ಟಲ್ ಮತ್ತು ಚೆನ್ನೈ ಎಸ್.ಆರ್.ಎಂ.ಯುನಿವರ್ಸಿಟಿ ತಂಡಗಳು ಮುಖಾಮುಖಿಯಾಯಿತು. ರೋಮಾಂಚಕಾರಿ ಹೋರಾಟದಲ್ಲಿ 3 – 0 ನೇರ ಸೆಟ್ ಗಳಿಂದ ಕರ್ನಾಟಕ ಚೆನ್ನೈ ತಂಡವನ್ನು ಪರಾಭವಗೊಳಿಸಿತು. ಸ್ಕೋರ್ 25 – 16, 30 – 28, 25 – 21

ಎ. ಕಾರ್ತಿಕ್ ಸಾರಥ್ಯದಲ್ಲಿ ಕರ್ನಾಟಕ ಪೋಸ್ಟಲ್ ಮತ್ತು ಎಸ್ . ಸಂತೋಷ್ ನೇತೃತ್ವದಲ್ಲಿ ಎಸ್.ಆರ್.ಎಂ. ತಂಡ ಮೈದಾನಕ್ಕಿಳಿದಿತ್ತು.

ಬಹುತೇಕ ಏಕಮುಖವಾಗಿ ಸಾಗಿದ ಮೊದಲ ಸೆಟ್ ನಲ್ಲಿ ಕರ್ನಾಟಕ ಆರಂಭದಿಂದಲೇ ಮುನ್ನಡೆ ಸಾಧಿಸಿತ್ತು. ಕರ್ನಾಟಕ ತಂಡದಲ್ಲಿ ನಾಯಕನ ಆಟವಾಡಿದ ಕಾರ್ತಿಕ್ ಆಟದ ಎಲ್ಲ ವಿಭಾಗಗಳಲ್ಲಿ ಮಿಂಚಿದರು. ಕಾರ್ತಿಕ್ ಅಬ್ಬರದ ಸ್ಮಾಶ್ ಗಳಿಗೆ ಎಸ್.ಆರ್.ಎಂ. ಹುಡುಗರ ಬಳಿ ಉತ್ತರವಿರಲಿಲ್ಲ. ಮತ್ತೊಂದೆಡೆ ಎಸ್.ಆರ್.ಎಂ. ತಂಡದ ಕಪ್ತಾನ ಸಂತೋಷ್ ಭರ್ಜರಿ ಹೊಡೆತಗಳ ಸಂತೋಷ ತಂದುಕೊಟ್ಟರು.

ಪಂದ್ಯದ ಎರಡನೇ ಸೆಟ್ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಎಸ್.ಆರ್.ಎಂ. ತಂಡ ಆರಂಭಿಕ‌ ಮುನ್ನಡೆ ಕಾಯ್ದುಕೊಂಡಿತು. ಒಂದು ಹಂತದಲ್ಲಿ ನಾಲ್ಕು ಅಂಕಗಳ ಮುನ್ನಡೆಯನ್ನು ಈ ತಂಡ ಹೊಂದಿತ್ತು. ಆದರೆ ಕರ್ನಾಟಕ ತಂಡ ಮತ್ತೆ ಲಯಕ್ಕೆ ಮರಳಿತು. ಅಲ್ಲಿಂದೀಚೆಗೆ ಸಮಬಲದ ಹೋರಾಟ. ಇತ್ತಂಡಗಳೂ ಒಂದೋಂದೇ ಅಂಕವನ್ನು ಪೇರಿಸುತ್ತಾ ಸೆಟ್ ಅಂತಿಮವಾಗಿ 30 – 28 ಅಂಕದಲ್ಲಿ ಸಮಾಪ್ತಿಯಾಯಿತು. ಕೊನೆ ಕ್ಷಣದ ಒತ್ತಡ ನಿಭಾಯಿಸಲು ಎಸ್.ಆರ್.ಎಂ. ನಿಂದ ಸಾಧ್ಯವಾಗಲಿಲ್ಲ.

ಮೂರನೇ ಸೆಟ್ ಕೂಡಾ ಡಿಫರೆಂಟ್ ಆಗಿರಲಿಲ್ಲ.‌ ಸಮಬಲದಲ್ಲೇ ಮುಂದುವರಿದ ಸೆಟ್ ನಲ್ಲಿ ಅಂತಿಮವಾಗಿ ಕರ್ನಾಟಕ ತನ್ನ ಖಾತೆಗೆ ಗೆಲುವನ್ನು ಚುಕ್ತಾ ಮಾಡಿತು.

ಪಂದ್ಯಾಟದುದ್ದಕ್ಕೂ ಕರ್ನಾಟಕ ತಂಡದ ಪರವಾಗಿ ಭಾರತೀಯ ವಾಲಿಬಾಲ್ ತಂಡದ ಕಪ್ತಾನ ಎಸ್.ಎ. ಕಾರ್ತಿಕ್, ವಿನಾಯಕ, ವರುಣ್, ರೈಸನ್ ಮಿಂಚಿದರೆ, ಎಸ್.ಆರ್.ಎಂ. ತಂಡದ ಪರವಾಗಿ ವಿಮಲ್ ರಾಜ್, ತುಷಾರ್ ಲವಾರೇ, ವಿನಾಯಕ ಮೂರ್ತಿ, ದಿಲೀಪ್ ಕುಮಾರ್ ಮಿಂಚಿದರು. ಹಲವು ಬಾರಿ ಲಿಬರೋ ಶ್ರೀಕಾಂತ್ ತಂಡದ ಸಹಾಯಕ್ಕೆ ಬಂದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.