Breaking News

ಪಂಜ: ಅಲ್ಪೆ-ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಕ್ಷೇತ್ರದಲ್ಲಿ ಬಾಳಿಲ ವಿಶ್ವನಾಥ ಪರವರಿಗೆ ಚಿನ್ನದ ಕಡಗ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಐವತ್ತೊಕ್ಲು ಗ್ರಾಮದ ಪಂಜ, ಅಲ್ಪೆ-ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು, ಉಳ್ಳಾಲ್ತಿ ಮಹಿಷಂದಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ದೈವಕ್ಕೆ ಶ್ರೀಮುಡಿ ಇಡುತ್ತಿರುವ ಬಾಳಿಲ ವಿಶ್ವನಾಥ ಪರವರಿಗೆ ದೈವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಚಿನ್ನದ ಬಳೆ (ಕಡಗ) ತೊಡಿಸಲಾಯಿತು.

ಕಳೆದ ಮೂರು ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ಪ್ರಧಾನ ಉಳ್ಳಾಕುಲು ದೈವದ ನರ್ತನ ಸೇವೆಯೊಂದಿಗೆ ಶ್ರೀಮುಡಿ ಇಡುತ್ತಿರುವ ಬಾಳಿಲ ವಿಶ್ವನಾಥ ಪರವರು ತಮ್ಮ ಜೀವಿತಾವಧಿ ಕಾಲದವರೆಗೆ ದೈವದ ಸೇವೆ ಮಾಡಿಕೊಂಡು ಬರುವಂತೆ ಚಿನ್ನದ ಕಡಗ ತೊಡಿಸಿ ಹರಸಲಾಯಿತು. ದೈವಸ್ಥಾನದ ಆಡಳಿತ ಮಂಡಳಿಯವರು ಮತ್ತು ಊರವರು ಸ್ಥಳೀಯ ದೇವಸ್ಥಾನದಲ್ಲಿ ದೇವರ ನಡೆಯಲ್ಲಿ ಹೂ ತೆಗೆದು ಬಳಿಕ ವಿಶ್ವನಾಥ ಪರವರು ಉಳ್ಳಾಕುಲು ದೈವದ ಶ್ರೀಮುಡಿ ಇಡಲು ಒಪ್ಪಿಗೆ ನೀಡಿದ್ದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯವರು ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.
ವಿಶ್ವನಾಥ ಪರವರು ಬಾಳಿಲ ಗ್ರಾಮದ ಬಾಳಿಲ ದಿ. ಬಾಬು ಪರವ ಮತ್ತು ಲಕ್ಷ್ಮಿ ದಂಪತಿಯ ಪುತ್ರರಾಗಿದ್ದು, ತಮ್ಮ 12ನೇ ವಯಸ್ಸಿನಲ್ಲಿಯೇ ತನ್ನ ತಂದೆ, ಸಹೋದರರೊಂದಿಗೆ ಈ ಕಾಯಕಕ್ಕೆ ಇಳಿದ ವಿಶ್ವನಾಥ ಪರವರು ಪ್ರಸ್ತುತ ಪುತ್ತೂರು ತಾಲೂಕಿನ ನಿಡ್ಪಳ್ಳಿ, ಇರ್ದೆ, ಬೆಟ್ಟಂಪಾಡಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ, ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಮತ್ತು ಕಳಂಜ, ಬಾಳಿಲ ಮತ್ತು ಮುಪ್ಪೇರ್ಯ ಗ್ರಾಮಗಳ ಹಲವು ಮನೆಗಳಲ್ಲಿ ದೈವ ನರ್ತನ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಉಳ್ಳಾಕುಲು, ಕಿನ್ನಿಮಾಣಿ-ಪೂಮಾಣಿ, ಧರ್ಮರಸು ಉಳ್ಳಾಕುಲು, ದುಗಲಾಯ, ಮಲರಾಯ, ಪಿಲಿ ಚಾಮುಂಡಿ, ಹೊಸಮ್ಮ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ, ವರ್ಣಾರ ಪಂಜುರ್ಲಿ, ಪುರುಷ ದೈವ, ಪುಣ್ಯ ಕುಮಾರ, ಕಾಲರ್ಕೈ, ಕನ್ಯಾಕುಮಾರಿ ಸೇರಿದಂತೆ ಎಲ್ಲಾ ದೈವಗಳ ನರ್ತನ ಸೇವೆಯನ್ನು ಮಾಡಿರುತ್ತಾರೆ.
ಸಣ್ಣ ಕೃಷಿಕರೂ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರೂ ಆಗಿರುವ ವಿಶ್ವನಾಥ ಪರವರ ಪತ್ನಿ ಶ್ರೀಮತಿ ಮೀನಾಕ್ಷಿ ಹೈನುಗಾರಿಕೆಯನ್ನು ಮಾಡಿದರೆ ಪುತ್ರಿಯರಾದ ಕು. ಕುಸುಮಾವತಿ ಮತ್ತು ಕು. ವಿದ್ಯಾ ವಿದ್ಯಾರ್ಥಿಗಳಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.