ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಬಾಳುಗೋಡು ಗ್ರಾಮದಲ್ಲಿ ‘ಪ್ರಕೃತಿ ಸಂಜೀವಿನಿ ಗ್ರಾಮ ಒಕ್ಕೂಟ’ ಇದರ ವತಿಯಿಂದ ‘ಸಂಜೀವಿನಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ’ ಗ್ರಾಮಸಭೆಯನ್ನು ಎ.28 ರಂದು ಏರ್ಪಡಿಸಲಾಗಿತ್ತು.
ಸಭಾ ಅಧ್ಯಕ್ಷತೆಯನ್ನು ಸಂಜೀವಿನಿ ಹಾಲು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶರ್ಮಿಳಾ ಗಿರೀಶ್ ಕಟ್ಟೆಮನೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕೆಎಂಎಫ್ನ ಅಧ್ಯಕ್ಷರಾಗಿರುವ ಎಸ್.ಪಿ. ಜಯರಾಮ ರೈ, ದ.ಕ. ಹಾಲು ಒಕ್ಕೂಟದ ನಾರಾಯಣ ಪ್ರಕಾಶ್, ಪುತ್ತೂರು ವಲಯದ ಉಪವ್ಯವಸ್ಥಾಪಕರಾದ ಡಾ|ಸತೀಶ್ ರಾವ್, ಕೆಎಂಎಫ್ನ ಸುಳ್ಯ ವಲಯದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಡೈರಿ ಘಟಕದ ಬಗ್ಗೆ ಮಾಹಿತಿ ನೀಡಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಮುಖ್ಯ ಪ್ರವರ್ತಕರಾಗಿ ಶರ್ಮಿಳಾ.ಕೆ ಯವರನ್ನು ಸೂಚಿಸಿ ಅನುಮೋದಿಸಲಾಯಿತು. ಕಾರ್ಯದರ್ಶಿಯಾಗಿ ಶ್ರೀಮತಿ ವಾಣಿಯವರನ್ನು ಸೂಚಿಸಲಾಯಿತು.
ಸಭೆಯಲ್ಲಿ ಹರಿಹರ ಗ್ರಾ.ಪಂ ಅಧ್ಯಕ್ಷರಾದ ಜಯಂತ ಬಾಳುಗೊಡು, ಉಪಾಧ್ಯಕ್ಷರಾದ ವಿಜಯ ಅಂಙಣ, ಗ್ರಾ.ಪಂ ಸದಸ್ಯರಾದ ಶ್ರೀಮತಿ ಬಿಂದು, ಶ್ರಿಮತಿ ಶಿಲ್ಪಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಮನೆ ಪುರುಷೋತ್ತಮ ಗೌಡ, ಎನ್ಅರ್ಎಲ್ಎನ್ನ ಸುಳ್ಯ ವಲಯದ ಮೇಲ್ವಿಚಾರಕರಾದ ಮಹೇಶ್, ಸ್ಥಳೀಯರಾದ ವಸಂತ ಕಿರಿಭಾಗ, ಜಗದೀಶ್ ಬಾಳುಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೀವಿನಿ ಒಕ್ಕೂಟದ ವೇದಾವತಿ ಕೆ.ಜೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಉಷಾಪ್ರಭಾಕರ್ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸವಿತಾ ಮತ್ತು ದಿವ್ಯಾ ಸಹಕರಿಸಿದರು. ಬಾಳುಗೋಡಿನ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು.