ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶ್ರಯ ಕಾಲೋನಿ ಎಂಬಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳಲಿರುವ 27 ಲಕ್ಷ ಅಂದಾಜು ಮೊತ್ತದ 1 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆಯು ಮೇ.05 ರಂದು ನಡೆಯಿತು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜೆ.ಟಿ ವೆಂಕಪ್ಪ ಗೌಡರು ದೀಪ ಬೆಳಗಿಸುವುದರ ಮೂಲಕ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಪವಿತ್ರಮಜಲು ತೆಂಗಿನಕಾಯಿ ಒಡೆಯುವುದರ ಮೂಲಕ ಗುದ್ದಲಿ ಪೂಜೆ ನೆರವೇರಿಸಿದರು.
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿಯವರು ಟ್ಯಾಂಕ್ ನಿರ್ಮಾಣಕ್ಕೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶಾಂತರಾಮ ಕಣಿಲೆಗುಂಡಿ, ಗ್ರಾಮ ಪಂಚಾಯತ್ ಸದಸ್ಯರಾದ ಯಸ್ ಯನ್ ದೇವಿಪ್ರಸಾದ್ ಕೊಪ್ಪತ್ತಡ್ಕ,ಶೇಖರ್ ಮಡ್ತಿಲ,ರವಿನಾಥ ಮಡ್ತಿಲ,ನಟರಾಜ ಸಿ-ಕೂಪ್,ಶೇಖರ ಕೊಯಿಲ,ದಾಮೋದರ ಜಬಳೆ,ಸಾತ್ವಿಕ್ ಕುದುಂಗು ಹಾಗೂ ಗ್ರಾಮದ ಪ್ರಮುಖರು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ .ಆರ್ .ರವರು ಸ್ವಾಗತಿಸಿ, ವಂದಿಸಿದರು.