ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ, ಪೆರ್ಲಂಪಾಡಿ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿನ ತಾಲೂಕು ಮಟ್ಟದ ಮರಾಟಿ ಸಮಾಜ ಬಾಂಧವರ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಶಿವಾಜಿ ಟ್ರೋಫಿ 2022 ಮೇ. 15ರಂದು ಪೆರ್ಲಂಪಾಡಿ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ನಡೆಯಲಿದೆ.
ವಿಜೇತರಿಗೆ ಶಿವಾಜಿ ಟ್ರೋಫಿ 2022ರೊಂದಿಗೆ ಪ್ರಥಮ ಬಹುಮಾನ ರೂ. 5000/-, ದ್ವಿತೀಯ ರೂ. 3000/-, ತೃತೀಯ ರೂ. 1000/- ಮತ್ತು ಉತ್ತಮ ಹೊಡೆತಗಾರ, ಉತ್ತಮ ಎಸೆತಗಾರ, ಉತ್ತಮ ಸರ್ವಾಂಗೀಣ ಆಟಗಾರ ಬಹುಮಾನ ನೀಡಲಾಗುವುದು. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಮೇ. 10ರ ಒಳಗಾಗಿ ರೂ. 600/- ಪಾವತಿಸಿ ತಮ್ಮ ತಂಡದ ಹೆಸರನ್ನು ನೋಂದಾಯಿಸುವುದು. ಮೊದಲು ಬಂದ 30 ತಂಡಗಳಿಗೆ ಮಾತ್ರ ಅವಕಾಶವಿದ್ದು, ಕ್ರೀಡಾಪಟುಗಳ ಆಧಾರ್ ಕಾರ್ಡನ್ನು ಸ್ಕಾನ್ ಮಾಡಲಾಗುವುದು. ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದೆಂದು ಸಂಘಟಕರು ತಿಳಿಸಿರುತ್ತಾರೆ. ಮೊ: 7337636991, 9972406835, 8073115896