ಇಂದು 4 ಪಂದ್ಯಾಟಗಳು
ನಿನ್ನೆ ಮುಂದೂಡಲ್ಪಟ್ಟ ಪಂದ್ಯ ನಾಳೆ
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ಅಸೋಸಿಯೇಶನ್ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆಯುವ 5 ದಿನಗಳ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ 2022ರ 2ನೇ ದಿನವಾದ ನಿನ್ನೆ 5 ಪಂದ್ಯಗಳ ಪೈಕಿ 3 ಪಂದ್ಯಗಳಷ್ಟೇ ನಡೆಯಿತು.
ಪುರುಷರ ವಿಭಾಗದಲ್ಲಿ ಎಸ್ಆರ್ಎಂ ಯುನಿವರ್ಸಿಟಿ ಮತ್ತು ಕರ್ನಾಟಕ ಪೋಸ್ಟಲ್ ತಂಡಗಳ ನಡುವೆ ಮೊದಲ ಪಂದ್ಯಾಟ ನಡೆದು ಕರ್ನಾಟಕ ವಿಜಯಿಯಾಯಿತು. ಈ ಪಂದ್ಯದ ಕೊನೆಯ ವೇಳೆಗೆ ಧಾರಾಕಾರ ಮಳೆ ಸುರಿದ ಪರಿಣಾಮ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಬಳಿಕ ರಾತ್ರಿ 1೦ ರ ವೇಳೆಗೆ ಮತ್ತೆ ಪಂದ್ಯಾಟ ಆರಂಭಗೊಂಡಿತು.
ಮಹಿಳೆಯರ ವಿಭಾಗದ ಮೂರನೇ ಪಂದ್ಯ ಕರ್ನಾಟಕ ಕ್ಲಬ್ ಮತ್ತು ಚೆನ್ನೈ ಐಸಿಎಫ್ ನಡುವೆ ನಡೆದು ಚೆನ್ನೈ ವಿಜಯಿಯಾಯಿತು. ಯುನೈಟೆಡ್ ಇಂಡಿಯಾ ಸ್ಪೈಕರ್ಸ್ ಗುಜರಾತ್ ಮತ್ತು ಕೇರಳ ಕೆಎಸ್ಇಬಿ ನಡುವೆ ನಡೆದ ಪಂದ್ಯದಲ್ಲಿ ಗುಜರಾತ್ ವಿಜಯಿಯಾಯಿತು. ಮಹಿಳೆಯರ ವಿಭಾಗದ ಎಸ್ಆರ್ಎನ್ ಯುನಿವರ್ಸಿಟಿ ಮತ್ತು ಕೇರಳ ಪೊಲೀಸ್ ನಡುವೆ ನಡೆಯಬೇಕಿದ್ದ ಪಂದ್ಯವನ್ನು ನಾಳೆಗೆ ಮುಂದೂಡಲಾಯಿತು. ಬಿಪಿಸಿಎಲ್ ಕೊಚ್ಚಿನ್ ಮತ್ತು ಕರ್ನಾಟಕ ಪೋಸ್ಟಲ್ ನಡುವೆ ನಡೆಯಲಿದ್ದ ಪುರುಷರ ವಿಭಾಗದ 4 ನೇ ಪಂದ್ಯದಲ್ಲಿ ತಡವಾದ ಕಾರಣ ಒಂದು ತಂಡ ಕಣಕ್ಕಿಳಿಯದೆ ವಾಕ್ಓವರ್ ನೀಡಲಾಯಿತು.
ಮಹಿಳೆಯರ ವಿಭಾಗದ ೫ನೇ ಪಂದ್ಯ ಕರ್ನಾಟಕ ಕ್ಲಬ್ ಮತ್ತು ಕೇರಳ ಪೊಲೀಸ್ ನಡುವೆ ನಡೆಯಲಿದೆ. ಮಹಿಳೆಯರ ವಿಭಾಗದ 6ನೇ ಪಂದ್ಯ ಐಸಿಎಫ್ ಮತ್ತು ಎಸ್ಆರ್ಎಂ ಯುನಿವರ್ಸಿಟಿ ನಡುವೆ ನಡೆಯಲಿದೆ. ಪುರುಷರ ವಿಭಾಗದ ೫ನೇ ಪಂದ್ಯ ಬಿಪಿಸಿಎಲ್ ಮತ್ತು ಎಸ್ಆರ್ಎಂ ಯುನಿವರ್ಸಿಟಿ ನಡುವೆ ನಡೆಯಲಿದ್ದು, ಪುರುಷರ ವಿಭಾಗದ 6ನೇ ಪಂದ್ಯ ಯುನೈಟೆಡ್ ಇಂಡಿಯಾ ಸ್ಪೈಕರ್ಸ್ ಮತ್ತು ಚೆನ್ನೈ ಐಒಬಿ ನಡುವೆ ನಡೆಯಲಿದೆ.