ಪುತ್ತೂರು ಲಘು ಉದ್ಯೋಗ ಭಾರತಿ ಸುಳ್ಯದ ಸದಸ್ಯರಿಂದ ಮೆಸ್ಕಾಂಗೆ ಮನವಿ
ಸುಳ್ಯದಲ್ಲಿ ಗಾಳಿ ಮಳೆಯ ಪರಿಣಾಮವಾಗಿ ದಿನನಿತ್ಯ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಪುತ್ತೂರು ಲಘು ಉದ್ಯೋಗ ಭಾರತಿಯ ಸುಳ್ಯದ ಸದಸ್ಯರಿಂದ ಸುಳ್ಯ ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಸುಳ್ಯ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಹರೀಶ್ ನಾಯ್ಕ್ ರಿಗೆ ನಿರಂತರ ವಿದ್ಯುತ್ ವ್ಯತ್ಯಯದಿಂದ ಸುಳ್ಯದ ಉದ್ಯಮಗಳಿಗೆ ಆಗುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಲಘು ಉದ್ಯಮ ಭಾರತಿ ಸುಳ್ಯದ ಸದಸ್ಯರಾದ ಸುಧಾಕರ ಕಾಮತ್, ಹರಿರಾಯ ಕಾಮತ್, ಪ್ರಭಾಕರನ್ ನಾಯರ್, ಕಸ್ತೂರಿ ಶಂಕರ್ , ಗೌತಮ್ ಭಟ್, ಪತಂಜಲಿ ಭಾರದ್ವಾಜ್, ಸುರೇಶ್ ಚಂದ್ರ ಭಟ್ ಕಮಿಲ, ಪ್ರಸನ್ನ ಎಂ.ಆರ್. ಅವರುಗಳು ಉಪಸ್ಥಿತರಿದ್ದು ಮನವಿ ಸಲ್ಲಿಸಿದರು.
ಸಕಾಲದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ ನೀಡಿದರೆಂದು ತಿಳಿದುಬಂದಿದೆ.