ಸಮೀಪದ ಅಡಿಕೆ ಅಂಗಡಿಗೆ ನುಗ್ಗಿದ ಮಳೆ ನೀರು ಅಂದಾಜು ಎರಡು ಲಕ್ಷ ರೂ. ನಷ್ಟ
ಮೇ. 5ರಂದು ಮುಂಜಾನೆ ಸುರಿದ ಬಾರೀ ಗಾಳಿ ಮಳೆಗೆ ಕನಕಮಜಲಿನ ಶ್ರೀ ನರಿಯೂರು ರಾಮಣ್ಣ ಗೌಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ತಡೆಗೋಡೆ ಕುಸಿತವಾಗಿದ್ದು, ಶಾಲೆಯ ಮುಂಭಾಗದಲ್ಲಿರುವ ಅಡಿಕೆ ಅಂಗಡಿಯೊಳಗೆ ಮಳೆ ನೀರು ನುಗ್ಗಿದ ಪರಿಣಾಮ ಅಂಗಡಿ ಕೋಣೆಯೊಳಗಿದ್ದ ಸುಮಾರು ಐವತ್ತಕ್ಕೂ ಅಧಿಕ ಅಡಿಕೆಯ ಗೋಣಿಚೀಲ, ಕರಿಮೆಣಸು ಮಳೆ ನೀರಿನಲ್ಲಿ ಒದ್ದೆಯಾಗಿದ್ದು, ಅಂದಾಜು ಎರಡು ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಶಾಲೆಯ ತಡೆಗೋಡೆ ಕುಸಿತಗೊಂಡ ಪರಿಣಾಮ ಸಮೀಪದಲ್ಲಿದ್ದ ಗುಡ್ಡಪ್ಪ ಗೌಡ ದೇವರಗುಂಡ ಅವರ ಕಾರು ಶೆಡ್ ಗೆ ಹಾನಿ ಸಂಭವಿಸಿದ್ದು, ಮಳೆ ನೀರು ಪಕ್ಕದಲ್ಲಿದ್ದ ಹಮೀದ್ ಹಾಜಿ ಅವರ ಭಾರತ್ ಸುಫಾರಿ ಟ್ರೇಡರ್ಸ್ ಗೆ ನುಗ್ಗಿದ್ದು, ಅಂಗಡಿ ಕೋಣೆಯಲ್ಲಿದ್ದ ಅಡಿಕೆ ಗೋಣಿ ಚೀಲಗಳು ಒದ್ದೆಯಾಗಿದೆ ಎಂದು ತಿಳಿದುಬಂದಿದೆ.