Breaking News

ಗುತ್ತಿಗಾರಿನಲ್ಲಿ”ಶತಾಯು” ಆಯುರ್ವೇದ ಕ್ಲಿನಿಕ್ ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ವಾಹನ ಸರ್ವಿಸ್ ಗೆ ಕೊಡುವ ಮಹತ್ವ ದೇಹದ ಸರ್ವಿಸ್ ಗೂ ಇರಲಿ: ಡಾ.ಚಿದಾನಂದ

ಗುತ್ತಿಗಾರಿನ ಮುತ್ತಪ್ಪ ನಗರದ ಬಿಂದುಶ್ರೀ ಸಂಕೀರ್ಣದಲ್ಲಿ ಮೇ.6 ರಂದು ಡಾ. ನಿಶಾಂತ್ ಆರ್ನೋಜಿ ಅವರ “ಶತಾಯು” ಆಯುರ್ವೇದ ಕ್ಲಿನಿಕ್ ಇಂದು ಶುಭಾರಂಭಗೊಂಡಿತು.


ಎ.ಓ.ಎಲ್.ಇ.ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ.ಚಿದಾನಂದರವರು ಕ್ಲಿನಿಕ್ ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು, ಈ ಸಂದರ್ಭ ಮಾತನಾಡಿದ ಅವರು ಮನುಷ್ಯ ವಾಹನ ಸರ್ವಿಸ್‌ ಮಾಡಲು ಶೋರೂಂ ನವರು ಹೇಳಿದ ದಿನ ತಪ್ಪದೆ ರಜೆ ಮಾಡಿಯಾದರೂ ಹೋಗುತ್ತಾರೆ. ಆದರೆ ವಾಹನಕ್ಕೆ ಕೊಡುವ ಮಹತ್ವ ನೀವು ನಿಮ್ಮ ಹೇಹದ ಆರೋಗ್ಯ ವೃದ್ಧಿಸಲು ಕೊಡುವುದಿಲ್ಲ. 6 ತಿಂಗಳಿಗೊಮ್ಮೆ ದೇಹ ಪರೀಕ್ಷಿಸಿಕೊಳ್ಳಿ. ದೇಹದ ಸರ್ವಿಸ್ ಡಾಕ್ಟರ್ ಬಳಿ ಮಾಡಿಸಿಕೊಳ್ಳಿ. ಆಗ ಉತ್ತಮ ಆರೋಗ್ಯ ನಿಮ್ಮಲ್ಲಿ ಇರುವಂತಾಗಬೇಕು ಎಂದರು. ವೈದ್ಯರು ಹಳ್ಳಿ ಕಡೆ ಯೋಜನೆ ಪತ್ರಿಕೆ ಗೆ ಸೀಮಿತವಾಗಿದೆ. ಹಳ್ಳಿಯಲ್ಲಿ ಉತ್ತಮ ಸೇವೆ ಇನ್ನೂ ಆಗಬೇಕಾಗಿದೆ. ಈಗಿನ ಕಾಲದಲ್ಲಿ ಹಳ್ಳಿಯಲ್ಲಿ ಬಿ ಎಂ ಎಸ್ ಕಲಿತವರು ಹೆಚ್ಚು ವೈದ್ಯ ಸೇವೆ ನೀಡುತ್ತಿದ್ದಾರೆ ಎಂದರು. ಕೆ ವಿ ಜಿ ಯಲ್ಲಿ ವರ್ಷಕ್ಕೆ 450 ವೈದ್ಯರು ಹೊರಕ್ಕೆ ಬರ್ತಾರೆ. ಸುಳ್ಯದಲ್ಲಿ ಕಾನ್ಸರ್ ಆಸ್ಪತ್ರೆ ಮತ್ತು ಕಾರ್ಡಿಯಾಲಜಿ ಆಸ್ಪತ್ರೆ ತೆರಯುವ ಉದ್ದೇಶ ಇರುವುದಾಗಿ ತಿಳಿಸಿದರು. ನಿಶಾಂತ್ ಅವರು ಎನಿ ಟೈಮ್ ಸಿಗುವ ವೈದ್ಯರು ಎಂದರು.

ಕೃಷಿಕ, ಸುಳ್ಯ ಕ.ಸಾ.ಪ.ಮಾಜಿ ಅಧ್ಯಕ್ಷ
ಎ.ಕೆ.ಹಿಮಕರ ಅಧ್ಯಕ್ಷತೆ ವಹಿಸಿದ್ದರು.ಕೆ.ವಿ.ಜಿ.ಆಯುರ್ವೇದ ಆಸ್ಪತ್ರೆ ಸುಳ್ಯ ಇದರ ಪ್ರಾಂಶುಪಾಲ ಡಾ ಲೀಲಾಧರ ಡಿ.ವಿ., ತಾಲೂಕು ಆರೋಗ್ಯಾಕಾರಿ ಡಾ ನಂದಕುಮಾರ್,
ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ ಆಚಳ್ಳಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಅಧ್ಯಕ್ಷ ನಿತ್ಯಾನಂದ ಮುಂಡೋಡಿ,
ಪ್ರಾ.ಕೃ.ಪ.ಸ.ಸಂಘ ಗುತ್ತಿಗಾರು ಇದರ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಂದುಶ್ರೀ ಸಂಕೀರ್ಣ ಇದರ ಮಾಲಕ
ಕೆ.ಬಾಲಕೃಷ್ಣ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು. ಎ ಕೆ ಹಿಮಕರ್ ಸ್ವಾಗತಿಸಿ, ವಂದಿಸಿದರು. ಹಲವಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

*ಹಿಂದುಳಿದ ಸುಳ್ಯದಲ್ಲಿ 1976 ರ ಬಳಿಕ ಕೆ ವಿ ಜಿ ಅವರಿಂದ ಬೆಳವಣಿಗೆ ಆಯ್ತು. ಇಲ್ಲಿ ಕ್ಲಿನಿಕ್ ತೆರೆದಿದ್ದೇವೆ. ಹಣವೇ ನಮ್ಮ ಆದ್ಯತೆಯಲ್ಲ. ಅದು ಎರಡನೇ ಆದ್ಯತೆ: ಎ ಕೆ ಹಿಮಕರ್

ನಿಶಾಂತ್ ನ ಗುರು ನಾನು, ನನ್ನ ಗುರು ಡಾ. ಚಿದಾನಂದರು ನಿಶಾಂತ್ ಮೂರನೆ ತಲೆಮಾರು: ಡಾ.ಲೀಲಾಧರ್

ಬೆಂಗಳೂರಿನಲ್ಲಿ ನನ್ನ ಪರ್ಸ್ ಪಿಕ್ ಪಾಕೆಟ್ ಆದಾಗ ನನ್ನನ್ನು ರಕ್ಷಿಸಿದವರು ಹಿಮಕರ್: ಡಾ. ನಂದಕುಮಾರ್

ಡೆಲ್ಲಿಯಲ್ಲಿ ಓದಿದ ಹಿಮಕರ್ ಮಗುನನ್ನು ಹಳ್ಳಿಯ ಸೇವೆಗೆ ಬಿಟ್ಟಿದ್ದಾರೆ. : ನಿತ್ಯಾನಂದ ಮುಂಡೋಡಿ

ಹಳ್ಳಿಯ ಸೇವೆ ಆರಂಭಿಸಿದ ನೀವು ಜನರಿಗೆ ಮಿಡಿಯುವ ಸೇವೆ ನೀಡುವಂತಾಗಲಿ. ಮುಕ್ತ ಮನಸ್ಸಿನ ಕೃತಜ್ಞತೆ ನಿಮಗೆ.: ವೆಂಕಟ್ ದಂಬೆಕೋಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.