ಕ್ರೀಡಾಕೂಟಗಳು ನಮ್ಮ ಸಂಘಟನೆ ಬಲಪಡಿಸುವುದರೊಂದಿಗೆ ಕುಟುಂಬಗಳ ಸಮ್ಮಿಲನವು ನಮ್ಮಲ್ಲಿ ಪ್ರೀತಿ ಬಾಂಧವ್ಯವನ್ನು ವೃದ್ಧಿಸುತ್ತದೆ: ಡಾ. ರೇಣುಕಾ ಪ್ರಸಾದ್ ಕೆ.ವಿ.

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕ್ರೀಡಾಕೂಟಗಳು ಕುಟುಂಬಗಳ ಹೆಸರಿನಲ್ಲಿ ನಡೆಯುತ್ತಿರುವುದುಅತ್ಯಂತ ಸಂತೋಷದ ವಿಚಾರ. ಏಕೆಂದರೆ ಇಂತಹ ಕ್ರೀಡಾ ಕೂಟಗಳು ಎರಡು ಮುಖ್ಯ ಉದ್ದೇಶಗಳಿಂದ ನಡೆಸಲ್ಪಡುತ್ತದೆ. ಒಂದನೇಯದಾಗಿ ನಮ್ಮಆರೋಗ್ಯ ಮತ್ತುದೈಹಿಕ ಸಾಮರ್ಥ್ಯ ಹೆಚ್ಚಿಸಲು, ಎರಡನೇಯದಾಗಿ ಇಂತಹ ಕ್ರೀಡಾಕೂಟಗಳು ನಮ್ಮ ಸಂಘಟನೆಗಳನ್ನು ಬಲಪಡಿಸುವುದರೊಂದಿಗೆ ಪ್ರತಿಯೊಂದು ಕುಟುಂಬಗಳ ಸಮ್ಮಿಲನವು ನಮ್ಮಲ್ಲಿ ಪ್ರೀತಿ, ಬಾಂಧವ್ಯವನ್ನು ವೃದ್ಧಿಸುತ್ತದೆ. ಕೊಡಗಿನ ಈ ಭಾಗದ ಜನರಿಗೆ ಜೀವನವನ್ನು ಅತ್ಯಂತ ಪ್ರೀತಿಯಿಂದ ಅಸ್ವಾದಿಸುವ ಗುಣವಿದೆ. ಇದಕ್ಕೆ ಪೂರಕವಾಗಿ ದೈಹಿಕ ಸಾಮರ್ಥ್ಯವು ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಚೆನ್ನಾಗಿದೆ. ಇಲ್ಲಿನ ಜನರು ಸಾಂಸ್ಕೃತಿಕವಾಗಿ, ಕ್ರೀಡಾತ್ಮಕವಾಗಿ, ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವುದರ ಜೊತೆಗೆ ಜೀವನ ಪದ್ಧತಿ, ಎಲ್ಲರೂ ಕೂಡಿಕೊಂಡು ಭೋಜನ ಕೂಟವನ್ನು ಏರ್ಪಡಿಸಿ ಮನೋರಂಜನೆಯನ್ನು ಆಯೋಜಿಸಿ ಸಂತೋಷ ಪಡುವುದು ಇಲ್ಲಿನ ಜನರ ವಿಶೇಷತೆ ಎಂದು ರಾಜ್ಯಒಕ್ಕಲಿಗರ ಸಂಘದ ಉಪಾಧ್ಯಕ್ಷ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿಯವರು ಹೇಳಿದರು.
ಅವರು ಮೇ. ೦೫ ರಂದು ಕೊಡಗು ಗೌಡ ಯುವ ವೇದಿಕೆ ಮಡಿಕೇರಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ನಮ್ಮ ತಂದೆಯವರಾದ ಕುರುಂಜಿಯವರು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಸಾಲು ಸಾಲು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದರಿಂದ ನಮ್ಮೊಳಗೆ ಒಂದು ಅವಿನಾಭಾವ ಸಂಬಂಧವಿದೆ. ನನ್ನ ಮಾತೃಶ್ರೀಯವರು ಕೂಡಾ ಈ ಜಿಲ್ಲೆಯವರೇ ಎಂಬುದು ಒಂದು ಸಂತೋಷದ ವಿಚಾರ. ಮುಂದೆ ರಾಜ್ಯಒಕ್ಕಲಿಗರ ಸಂಘಕ್ಕೆ ಸದಸ್ಯತನ ನೋಂದಣಿ ಮಾಡುವ ಸಂದರ್ಭದಲ್ಲಿ ಈ ಭಾಗದ ನೂರು ಜನಆರ್ಥಿಕವಾಗಿ ಹಿಂದುಳಿದ ಅರೆಭಾಷೆ ಗೌಡರಿಗೆ ಉಚಿತವಾಗಿ ನನ್ನ ವತಿಯಿಂದ ಸದಸ್ಯತನ ಮಾಡಿಕೊಡಲಾಗುವುದೆಂದು ಘೋಷಣೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗೌಡಯುವ ವೇದಿಕೆಯ ಅಧ್ಯಕ್ಷರಾದ ಪೈಕೇರ ಮನೋಹರ್ ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡರವಿ ಕುಶಾಲಪ್ಪ, ಮಡಿಕೇರಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಪೂವಯ್ಯ, ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜ್ ಸುಳ್ಯ ಇದರ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್‌ಊರುಬೈಲು, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಿಲೆ ಸೋಮಣ್ಣ, ದಾನಿಗಳಾದ ಡಾ. ಮಂತರ್‌ಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಆಯುಕ್ತರಾದ ಗುರುಸ್ವಾಮಿ ಮತ್ತು ಪೇರಿಯಾನ ಜಯಾನಂದ, ನಗರ ಸಭೆ ಸದಸ್ಯರಾದ ಶ್ರೀಮತಿ ಶ್ವೇತಾ ಪ್ರಶಾಂತ್, ಸತೀಶ್‌ಕುಮಾರ್ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.