ಪ್ರಣವ ಸೌಹಾರ್ದ ಸಹಕಾರಿ ಸಂಘದ 6 ನೇ ಶಾಖೆ ಸುಳ್ಯದಲ್ಲಿ ಲೋಕಾರ್ಪಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಸಹಕಾರಿ ತತ್ವ ಬದುಕಿನ ತತ್ವಕ್ಕೆ ಸಮ : ಒಡಿಯೂರು ಶ್ರೀ

ಗ್ರಾಹಕರ ವಿಶ್ವಾಸರ್ಹತೆ ಉಳಿಸಿ
ಪ್ರಣವ ವಿಸ್ತಾರವಾಗಿ ಬೆಳೆಯಲಿ : ಸಚಿವ ಎಸ್.ಅಂಗಾರ

 

“ಪ್ರತಿಯೊಂದು ಕ್ಷೇತ್ರ ಬೆಳವಣಿಗೆಯಾಗಬೇಕಾದರೆ ಆರ್ಥಿಕ ವ್ಯವಸ್ಥೆ ಪ್ರಮುಖ ಅಂಗ. ಜಿಲ್ಲೆಯಲ್ಲಿ ಉತ್ತಮ ಸೇವೆಯನ್ನು ನೀಡುತ್ತಿರುವ ಪ್ರಣವ ಸಹಕಾರಿ ಸಂಘದ ಶಾಖೆ ಸುಳ್ಯದಲ್ಲಿ ಆರಂಭಗೊಂಡಿದೆ. ಈ ಸಂಸ್ಥೆ ಗ್ರಾಹಕರ ವಿಶ್ವಾಸರ್ಹತೆ ಉಳಿಸಿಕೊಂಡು ವಿಸ್ತಾರವಾಗಿ ಬೆಳೆಯಲಿ” ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘದ 6 ನೇ ಶಾಖೆ ಸುಳ್ಯದ ಶ್ರೀರಾಂ ಪೇಟೆಯ ಸಾಯಿರಾಂ ಕಾಪ್ಲೆಕ್ಸ್ ನಲ್ಲಿ ಆರಂಭಗೊಂಡಿದ್ದು ಈ ಶಾಖೆಯನ್ನು ಲೋಕಾರ್ಪಣೆ ಮಾಡಿ ಬಳಿಕ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಶುಭಹಾರೈಸಿದರು.
“7 ವರ್ಷದಲ್ಲಿ 6 ಶಾಖೆಯನ್ನು ಪ್ರಣವ ಸಂಸ್ಥೆ ಹುಟ್ಟು ಹಾಕಿರುವುದು ದೊಡ್ಡ ಸಾಧನೆ. ವ್ಯವಹಾರದಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕರಾಗಿದ್ದಾಗ ಸಂಸ್ಥೆ ತನ್ನಿಂತಾನೆ ಬೆಳವಣಿಗೆ ಹೊಂದುತ್ತದೆ. ಈ ಸಂಸ್ಥೆಗೆ ಉತ್ತಮ ಭವಿಷ್ಯವಿದೆ” ಎಂದು ಸಚಿವರು ಹೇಳಿದರು.

ಸಂಸ್ಥೆಯಲ್ಲಿ ದೀಪ ಬೆಳಗಿ ಆಶೀರ್ವಚನಗೈದ ಒಡಿಯೂರು ಮಹಾಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನಗೈದರು. “ಸಹಕಾರಿ ತತ್ವ ಬದುಕಿನ ತತ್ವಕ್ಕೆ ಸಮಾನವಾಗಿದೆ. ವ್ಯವಹಾರದಲ್ಲಿ ಕೊಡು-ಕೊಳ್ಳುವಿಕೆ ಪ್ರಜ್ಞೆ ಇರುವಾಗ ಬೆಳವಣಿಗೆ ಸಾಧ್ಯ. ಡಾ| ಕುರುಂಜಿಯವರ ಕಾರಣದಿಂದ ಸುಳ್ಯ ಹೆಸರು ಮಾಡಿದೆ. ಪ್ರಣವ ಸಂಸ್ಥೆ ಕೂಡಾ ಸುಳ್ಯಕ್ಕೆ ಹೊಸ ಕೊಡುಗೆಯಾಗಿ ಬಂದಿದೆ. ಇಲ್ಲಿಯ ಜನ ಇದನ್ನು ಬೆಳೆಸುತ್ತಾರೆ” ಎಂದು ಹೇಳಿದರು.

ಶಾಖೆಯ ಆಪ್ ಬಿಡುಗಡೆಗೊಳಿಸಿದ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರರು ಮಾತನಾಡಿ “ಸಹಕಾರಿ ಅತ್ಯುತ್ತಮ ಕ್ಷೇತ್ರ. ಪ್ರತಿಯೊಂದು ಕಷ್ಟ ಕಾಲದಲ್ಲಿಯೂ ಕೈ ಹಿಡಿದು ಮೇಲೆತ್ತಿರುವುದು ಸಹಕಾರಿ ಕ್ಷೇತ್ರ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಭಿವೃದ್ಧಿಯ ಪ್ರತಿ ಮಜಲಿನಲ್ಲಿಯೂ ಈ ಕ್ಷೇತ್ರ ವಿಶೇಷ ಕೊಡುಗೆ ನೀಡಿದೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾಪ್ರಸಾದ್ ಮಾತನಾಡಿ, “ಸುಳ್ಯದಲ್ಲಿ ಆರಂಭಗೊಂಡ ಪ್ರಣವ ಸಹಕಾರಿ ಸಂಘದಿಂದ ಜನರಿಗೆ ಉತ್ತಮ ಸೇವೆ ಸಿಗಲಿ. ಈ ಸಂಸ್ಥೆ ದಶಮಾನೋತ್ಸವ ಆಚರಿಸುವ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಶಾಖೆಗಳನ್ನು ಹುಟ್ಟುಹಾಕಿ ವಿಸ್ತಾರಗೊಳ್ಳಲಿ” ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಜಿ.ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಶಾಖೆಯ ಸಲಹಾ ಸಮಿತಿ ಸದಸ್ಯರುಗಳಾದ ಕೆ.ಸತ್ಯಪ್ರಸಾದ್ ಕುರುಂಜಿ, ಅಬ್ದುಲ್ ಹಮೀದ್ ಎಸ್. ವೇದಿಕೆಯಲ್ಲಿದ್ದರು.

ಸನ್ಮಾನ : ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜರನ್ನು ಸಮಾರಂಭದಲ್ಲಿ ಪ್ರಣವ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಮೇಘ ಕೃಷ್ಣ ಪ್ರಾರ್ಥಿಸಿದರು. ಸುಳ್ಯ ಶಾಖಾ ಸಲಹಾ ಸಮಿತಿ ಸದಸ್ಯ ಸಂತೋಷ್ ಜಾಕೆ ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷ ಜಿ.ಪ್ರಶಾಂತ್ ಪೈ ವಂದಿಸಿದರು. ಯಶ್ವಿತ್ ಕಾಳಮ್ಮನೆ ಹಾಗೂ ಶ್ರೀಮತಿ ಸುಶ್ಮಿತಾ ಜಾಕೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು
ದೀಪಾಂಜಲಿ ಮಹಿಳಾ ಮಂಡಳಿ ಶಾಂತಿನಗರ ಇವರಿಂದ ಭಜನಾ ಸೇವೆ ಹಾಗೂ ಸಭಾ ಕಾರ್ಯಕ್ರಮದ ನಂತರ ಟೀಮ್ ಟ್ಯಾಲೆಂಟ್ ಹಂಟರ್‍ಸ್ ಇವರಿಂದ ಕೊಳಲು ವಾದನ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.