ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕರ್ನಾಟಕ ಕ್ಲಬ್ ವಿರುದ್ಧ ಕೇರಳ ಪೊಲೀಸ್ ಗೆ ಅನಾಯಾಸ ಜಯ

ಸಂಘಟಿತ ಶ್ರಮದ ಮುಂದೆ ಶರಣಾದ ಕರ್ನಾಟಕ ಮಹಿಳೆಯರು

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ನ
ಮೂರನೇ ದಿನದ ಎರಡನೇ ಪಂದ್ಯ ಹಾಗೂ ಟೂರ್ನಿಯ ಐದನೇ ಮಹಿಳಾ ಪಂದ್ಯದಲ್ಲಿ ಕರ್ನಾಟಕ ಕ್ಲಬ್ ತಂಡವು
ಕೇರಳ ಪೊಲೀಸ್ ತಂಡಕ್ಕೆ ಶರಣಾಗಿದೆ.

ಕರ್ನಾಟಕ ಕ್ಲಬ್ ಗೆ ಇದು ಟೂರ್ನಿಯ ಮೂರನೇ ಪಂದ್ಯವಾಗಿದ್ದರೆ, ಕೇರಳ ಪೊಲೀಸ್ ಗೆ ಎರಡನೇ ಪಂದ್ಯವಾಗಿತ್ತು., ನಿತ್ಯ ಪಿ.ಎಚ್. ನೇತೃತ್ವದಲ್ಲಿ ಕರ್ನಾಟಕ ತಂಡ ಹಾಗೂ ಆದಿರಾ ಎಂ.ಆರ್. ಸಾರಥ್ಯದಲ್ಲಿ ಕೇರಳ ತಂಡಗಳು ಅಂಗಣಕ್ಕಿಳಿದಿತ್ತು.

ಏಕಮುಖವಾಗಿ ಸಾಗಿದ ಮೊದಲ ಸೆಟ್ ನ್ನು ಕೇರಳ ತಂಡ ನಿರಾಯಾಸವಾಗಿ ಗೆದ್ದುಕೊಂಡಿತು. ರೋಶ್ನಾ ಜಾನ್ ಅವರ ಸ್ಮಾಶ್ ಮತ್ತು ಬ್ಲಾಕ್ , ಅಂಜು ಮೋಳ್ ಅವರ ಬ್ಲಾಕ್ , ಅನಘ ಅವರ ಕರಾರುವಕ್ಕಾದ ಸರ್ವ್ ಸಹಿತ ಸಂಘಟಿತ ಆಟದ ಎದುರು ಯಾವುದೇ ಪ್ರತಿರೋಧ ತೋರಲು ಕರ್ನಾಟಕ ಸಫಲವಾಗಲಿಲ್ಲ. 25 – 14 ಅಂತರದಲ್ಲಿ ಪಂದ್ಯ ಕೇರಳ ಪರವಾಯಿತು.

ಮೊದಲನೇ ಸೆಟ್ ನ ಹಿನ್ನಡೆಗೆ ಪ್ರತಿರೋಧ ತೋರಿದ ಕರ್ನಾಟಕ ಆರಂಭಿಕ ಹಿನ್ನಡೆಯ ಬಳಿಕ ಚಿಗಿತು ನಿಂತಿತು.‌ ಒಂದು ಹಂತದಲ್ಲಿ ಒಂದು ಅಂಕದ ಮುನ್ನಡೆಯಲ್ಲಿದ್ದ ಕರ್ನಾಟಕ ಬಳಿಕದ ಹಂತದಲ್ಲಿ‌ ಸಮಬಲ ಸಾಧಿಸುತ್ತಾ ಹೋಯಿತು. ಈ ಹಂತದಲ್ಲಿ ಟೈಮ್ ಔಟ್ ಪಡೆದು ಕೇರಳ ತಂಡಕ್ಕೆ ಕೋಚ್ ಮಧುಸೂಧನ್ ಪಣಿಕ್ಕರ್ ನೀಡಿದ ಟಿಪ್ಸ್ ತಂಡದ ನೆರವಿಗೆ ಬಂತು. ಕರ್ನಾಟಕದ ಪ್ರತಿರೋಧವನ್ನು ಹಿಮ್ಮೆಟ್ಟಿಸಿದ ಕೇರಳ ಪಂದ್ಯದ ಗತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಶ್ರುತಿ ಸಿ. ಯವರ ಭರ್ಜರಿ ಸ್ಮಾಶ್ ಅಂಕಗಳ ಮುನ್ನಡೆ ತಂದುಕೊಟ್ಟಿತು. ಚೆಂಡು ನೆಲ ಮುಟ್ಟದೆ ಆಟಗಾರರ ಕೈಗಳಲ್ಲಿ ವಿಹರಿಸುತ್ತಿದ್ದಾಗ ರೋಶ್ನಾ ಅವರ ಶಕ್ತಿಶಾಲಿ ಸ್ಮಾಶ್ ನಿರ್ಣಾಯಕ ಹಂತಕ್ಕೆ ತಂದು ನಿಲ್ಲಿಸಿತು. ಅನಘ ಅವರ ಭರ್ಜರಿ ಹೊಡೆತದೊಂದಿಗೆ 25 – 19 ಅಂತರದೊಂದಿಗೆ ಗೆಲುವಿನ ಹಿಡಿತ.

ಮೂರನೇ ಸೆಟ್ ನಲ್ಲಿ ತೀವ್ರ ಆರಂಭಿಕ ಹಿನ್ನಡೆ ಗಳಿಸಿದ ಕರ್ನಾಟಕ ಅದೇ ವೇಗದಲ್ಲಿ ಮರಳಿ‌ ಆಟದ ಲಯಕ್ಕೆ ಮರಳಿ ಅಂಕ ಪೇರಿಸಿತು. ಮಾತ್ರವಲ್ಲ 15 – 13 ಲೀಡ್ ಸಾಧಿಸಿತು. ಸತತ ಎರಡು ಯಶಸ್ವಿ ಬ್ಲಾಕ್ ಮತ್ತು ಒಂದು ಪ್ಲೇಸಿಂಗ್ ಮೂಲಕ ಈ ಸವಾಲು ದಾಟಿದ ಕೇರಳ ನಂತರ ಪ್ರದರ್ಶಿಸಿದ ಆಕ್ರಮಣಕಾರಿ ಆಟಕ್ಕೆ ಕರ್ನಾಟಕ ತಂಡದಲ್ಲಿ ಉತ್ತರವಿರಲಿಲ್ಲ. 25 – _16 ಅಂಕಗಳೊಂದಿಗೆ ಪಂದ್ಯ ಮುಗಿಸಿದ ಕೇರಳ‌ 3 – 0 ಸೆಟ್ ನಲ್ಲಿ ಪಂದ್ಯ ಗೆದ್ದಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.