ಬಿಪಿಸಿಎಲ್ ಕೊಚ್ಚಿನ್ V/s ಕೆಎಸ್ಇಬಿ ಕೇರಳ
ಯುನೈಟೆಡ್ ಇಂಡಿಯಾ ಸ್ಪೈಕರ್ಸ್ ಗುಜರಾತ್ V/s ಕರ್ನಾಟಕ ಪೋಸ್ಟಲ್
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್, ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ಸಂಘಟನಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ನ 4 ನೇ ದಿನವಾದ ಇಂದು ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಬಿಪಿಸಿಯ ಕೊಚ್ಚಿನ್ ಮತ್ತು ಕೆಎಸ್ಇಬಿ ಕೇರಳ ತಂಡಗಳ ನಡುವೆ ಮೊದಲ ಸೆಮಿಫೈನಲ್ ಸಂಜೆ 7.3೦ಕ್ಕೆ ನಡೆಯಲಿದೆ. ರಾತ್ರಿ 9 ಗಂಟೆಗೆ ನಡೆಯುವ ಇನ್ನೊಂದು ಸೆಮಿಫೈನಲ್ನಲ್ಲಿ ಯುನೈಟೆಡ್ ಇಂಡಿಯಾ ಸ್ಪೈಕರ್ಸ್ ಗುಜರಾತ್ ಮತ್ತು ಕರ್ನಾಟಕ ಪೋಸ್ಟಲ್ ನಡುವೆ ನಡೆಯಲಿದೆ.
ಮೊನ್ನೆ ಮುಂದೂಡಲ್ಪಟ್ಟಿದ್ದ ಮಹಿಳೆಯರ ವಿಭಾಗದ ಕೊನೆಯ ಲೀಗ್ ಪಂದ್ಯ ಸಂಜೆ 6 ಗಂಟೆಗೆ ಕೇರಳ ಪೊಲೀಸ್ ಮತ್ತು ಎಸ್ಆರ್ಎನ್ ಯುನಿವರ್ಸಿಟಿ ನಡುವೆ ನಡೆಯಲಿದೆ.