ಮೇ.21ರಂದು ಕೊರಗಜ್ಜ ದೈವದ ಕೋಲದೊಂದಿಗೆ ಮೂರ್ತಿ ಪ್ರತಿಷ್ಠಾಪನೆ
ಅತ್ಯಂತ ಕಾರ್ಣಿಕದ ಕ್ಷೇತ್ರವಾದ ಸಂಪಾಜೆ ಗ್ರಾಮದ ದೊಡ್ಡಡ್ಕದ ಶ್ರೀ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಉಡುಪಿಯ ಕಾರ್ಕಳದಿಂದ ಸ್ವಾಮಿ ಕೊರಗಜ್ಜ ದೈವದ ಮೂರ್ತಿಯನ್ನು ಮೇ.5ರಂದು ತರಲಾಯಿತು.
ದೊಡ್ಡಡ್ಕದ ಶ್ರೀ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಸ್ವಾಮಿ ಕೊರಗಜ್ಜ ದೈವದ ಮೂರ್ತಿಯನ್ನು ತರಲಾಯಿತು.
ಅರಂತೋಡಿನಿಂದ ಬ್ಯಾಂಡ್ ವಾಲಗದ ಮೆರವಣಿಗೆಯೊಂದಿಗೆ ದೊಡ್ಡಡ್ಕದ ದೈವಸ್ಥಾನಕ್ಕೆ ತರಲಾಯಿತು.
ದೈವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ನೀರಿನ ಟ್ಯಾಂಕಿಯಲ್ಲಿ ಕೊರಗಜ್ಜ ದೈವದ ಪ್ರತಿಮೆಯನ್ನು ಮಲಗಿಸಿ, ನೂತನವಾಗಿ ತೆಗೆದ ಬಾವಿಯ ನೀರನ್ನು ತೆಗೆದು ಟ್ಯಾಂಕಿಗೆ ತುಂಬಿಸಲಾಯಿತು.
ಹೀಗೆ ಪ್ರತಿನಿತ್ಯ 16 ದಿನಗಳ ಕಾಲ ಮೂರ್ತಿಯನ್ನು ನೀರಿನಲ್ಲಿ ಇಟ್ಟು ಮೇ.21ರಂದು ಸ್ವಾಮಿ ಕೊರಗಜ್ಜ ದೈವದ ಕೋಲದೊಂದಿಗೆ ಮೂರ್ತಿಯನ್ನು ಪ್ರತಿಷ್ಠಾಪನೆಗೊಳಿಸಲಾಗುವುದು ಎಂದು ತಿಳಿದುಬಂದಿದೆ.