ಕಡಬ ತಾಲೂಕು ಮರ್ಧಳ ನಿವಾಸಿ ನಿವೃತ್ತ ಉಪವಲಯ ಅರಣ್ಯಾಧಿಕಾರಿ ದಿ.ವಾಸುದೇವ ಆಚಾರ್ಯ ರವರ ಪತ್ನಿ ಶ್ರೀಮತಿ ಲಲಿತಾ ಆಚಾರ್ಯ ರವರು
ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ.5 ರಂದು ನಿಧನರಾದರು. ಅವರಿಗೆ 64 ವರುಷ ವಯಸ್ಸಾಗಿತ್ತು.ಮೂಲತಃ ಅವರು ಪಂಜದ ನಾಯರ್ ಕೆರೆ ಯವರು.
ಮರ್ಧಳದಲ್ಲಿ ಜಾಗ ಖರೀದಿಸಿ ಬಳಿಕ ಅಲ್ಲಿ ಮನೆ ಮಾಡಿ ವಾಸವಾಗಿದ್ದರು.ಮೃತರು ಪುತ್ರ ಭುವನೇಶ್ವರ, ಪುತ್ರಿಯರಾದ ಶ್ರೀಮತಿ ಶುಭ, ಶ್ರೀಮತಿ ಜಯ , ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಬಂಧುಮಿತ್ರರನ್ನು. ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರ ಪಂಜದಲ್ಲಿ ಜರುಗಿತು.