ಪುರುಷೋತ್ತಮ ಕೋಲ್ಚಾರು, ಸಂಧ್ಯಾಕುಮಾರಿ, ಸುಭಾಶ್ ಡಿ.ಕೆ., ಶರತ್ ಮರ್ಗಿಲಡ್ಕ ರಿಗೆ ಸನ್ಮಾನ
ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ, ಶೌರ್ಯ ಯುವತಿ ಮಂಡಲ ಪೈಲಾರಿಗೆ ಗೌರವ
ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕು ಹಾಗೂ ಯುವಜನ ಸೇವಾ ಸಂಸ್ಥೆ ಸುಳ್ಯ ಇದರ ಆಶ್ರಯದಲ್ಲಿ ಯುವ ಸಂಭ್ರಮ -೨೦೨೨ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಸಾಧಕ ಮತ್ತು ಸಂಸ್ಥೆಗಳಿಗೆ ಪುರಸ್ಕಾರ ಮೇ.೧೪ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ವಿವರ ನೀಡಿದರು. ಸಂಜೆ ೭ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಚಿವ ಎಸ್.ಅಂಗಾರಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಸಂಘಟನೆ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಪುರುಷೋತ್ತಮ ಕೋಲ್ಚಾರು, ಶೈಕ್ಷಣಿಕ ಸಾಧನೆಗಾಗಿ ಕು| ಸಂಧ್ಯಾಕುಮಾರಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುಭಾಶ್ ಡಿ.ಕೆ., ಯೋಗ ಪಟು ಶರತ್ ಮರ್ಗಿಲಡ್ಕರನ್ನು ಸನ್ಮಾನಿಸಲಾಗುವುದು. ರಾಜ್ಯಪ್ರಶಸ್ತಿ ಪುರಸ್ಕ್ರತವಾದ ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಹಾಗೂ ಶೌರ್ಯ ಯುವತಿ ಮಂಡಲ ಪೈಲಾರು ಸಂಸ್ಥೆಯನ್ನು ಗೌರವಿಸಲಾಗುವುದು.
ಈ ಹಿಂದೆ ತಾಲೂಕು ಮಟ್ಟದಲ್ಲಿ ಯುವಜನ ಮೇಳಗಳು ನಡೆಯುತ್ತಿದ್ದು ಈಗ ನಿಲ್ಲಿಸಲಾಗಿದೆ. ಜಾನಪದ ಕಲೆಗಳು ನಶಿಸಿ ಹೋಗಬಾರದು, ಯುವಕ ಮಂಡಲದ ಪ್ರತಿಭೆಗಳ ಕಲೆಗೆ ಅವಕಾಶ ಸಿಗಬೇಕೆನ್ನುವ ನಿಟ್ಟಿನಲ್ಲಿ ಈ ಬಾರಿ ಆಯ್ದ ೧೧ ಯುವಕ ಮಂಡಲಗಳಿಗೆ ಸಾಂಸ್ಕ್ರತಿಕ ವೇದಿಕೆ ನೀಡಲಾಗಿದೆ. ಭಜನೆ, ಭರತನಾಟ್ಯಮ ವೀರಗಾಸೆ ಕುಣಿತ, ಹುಲಿವೇಷ ಕುಣಿತ, ಕಂಗೀಲು ಕುಣಿತ ಮತ್ತು ಕೋಲಾಟ, ಜಾನಪದ ಹಾಡು, ಭಾವಗೀತೆ, ಲಾವಣಿ, ಏಕಪಾತ್ರಬಿನಯ, ಡೊಳ್ಳು ಕುಣಿತ, ನೃತ್ಯ ವೈಭವ ನಡೆಯುವುದು.
ಬಳಿಕ ಬಲೆ ತೆಲಿಪಾಲೆ ತಂಡದಿಂದ ಕಾಮಿಡಿ ಶೋ ನಡೆಯುವುದು ಎಂದು ಅವರು ವಿವರ ನೀಡಿದರು.
ಮಂಡಳಿಯ ಮೇಲಂತಸ್ತು ಉದ್ಘಾಟನೆ : ಯುವಜನ ಸಂಯುಕ್ತ ಮಂಡಳಿಯಲ್ಲಿ ಮೇಲಂತಸ್ತು ಕಾಮಗಾರಿ ನಡೆಯುತ್ತಿದ್ದು, ಮೇ.೧೪ರಂದು ಉದ್ಘಾಟನೆ ಮಾಡಬೇಕೆಂದು ಗುರಿ ಇಡಲಾಗಿದೆ. ಬಳಿಕ ತಾಲೂಕಿನ ಯುವಕ – ಯುವತಿ ಮಂಡಲಗಳಿಗೆ ತರಬೇತಿಯನ್ನು ಅಲ್ಲಿ ನೀಡಲಾಗುವುದು ಎಂದು ಗೌರವ ಸಲಹೆಗಾರರಾದ ದೀಪಕ್ ಕುತ್ತಮೊಟ್ಟೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ಅನಿಲ್ ಪೂಜಾರಿಮನೆ, ಉಪಾಧ್ಯಕ್ಷ ತೇಜಸ್ವಿ ಕಡಪಳ, ಆರ್. ಕೆ. ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಸತೀಶ್ ಮೂಕಮಲೆ, ಜತೆ ಕಾರ್ಯದರ್ಶಿ ಸಂಜಯ್ ನೆಟ್ಟಾರು, ಕೋಶಾಧಿಕಾರಿ ವಿಜಯಕುಮಾರ್ ಉಬರಡ್ಕ, ಕ್ರೀಡಾ ಕಾರ್ಯದರ್ಶಿ ಪವನ್ ಪಲ್ಲತಡ್ಕ, ನಿರ್ದೇಶಕರುಗಳಾದ ಪ್ರವೀಣ ಜಯನಗರ, ರಾಜೀವಿ ಲಾವಂತಡ್ಕ, ತುಳಸಿ ಕೇವಳ, ವಿನುತಾ ಪಾತಿಕಲ್ಲು, ದಯಾನಂದ ಪಾತಿಕಲ್ಲು, ಮುರಳಿ ನಳಿಯಾರು, ಜನಾರ್ಧನ ನಾಗತೀರ್ಥ, ನಮಿತಾ ಬಿ.ವಿ., ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ, ದೀಪಕ್ ಕುತ್ತಮೊಟ್ಟೆ, ಶಂಕರ್ ಪೆರಾಜೆ ಇದ್ದರು.